HomeBreaking NewsLatest NewsPoliticsSportsCrimeCinema

ಕಾಂಗ್ರೆಸ್ ಸರ್ಕಾರ ಬಂದ ಮೇಲೆ 40%  ಕ್ರೈಮ್ ರೇಟ್ ಹೆಚ್ಚಳ- ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ.

01:19 PM Apr 19, 2024 IST | prashanth

ಹುಬ್ಬಳ್ಳಿ, ಏಪ್ರಿಲ್, 19,2024 (www.justkannada.in):  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ 40% ಕ್ರೈಮ್ ರೇಟ್ ಹೆಚ್ಚಳವಾಗಿದೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಯುವತಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು  ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 40% ಕ್ರೈಮ್ ರೇಟ್ ಹೆಚ್ಚಳವಾಗಿದೆ. ಪೊಲೀಸ್ ಠಾಣೆಗಳು ಸೆಟಲ್ ಮೆಂಟ್ ಕೇಂದ್ರಗಳಾಗಿವೆ. ಹುಬ್ಬಳ್ಳಿ ಕಾಲೇಜಿನ ಕ್ಯಾಂಪಸ್ ನಲ್ಲಿ ಯುವತಿಗೆ 9 ಬಾರಿ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾನೆ. ಅವನ ಹಿಂದೆ ದೊಡ್ಡ ಶಕ್ತಿಇದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಇದ್ದಾರೆ ಅವರನ್ನ ಇನ್ನೂ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಹುಡುಗ ಹುಡಿಗಿ ನಡುವೆ ಲವ್ ಇತ್ತು ಎನ್ನುತ್ತಾರೆ. ನಮಗಿರುವ  ಮಾಹಿತಿ ಪ್ರಕಾರ ಇದರ ಹಿಂದೆ ಇನ್ನೂ ನಾಲ್ವರು ಇದ್ದಾರೆ.  ಯುವತಿ ತಂದೆಯೇ ನಾಲ್ವರು ಹೆಸರು ಕೊಟ್ಟಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: increase, crime rate, Basavaraj Bommai

Tags :
40% increase - crime rate - Congress government -Basavaraj Bommai
Next Article