For the best experience, open
https://m.justkannada.in
on your mobile browser.

ಟಿ-20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ಕನ್ನಡಿಗ ಕೆ.ಎಲ್ ರಾಹುಲ್ ಗೆ ಇಲ್ಲ ಸ್ಥಾನ.

04:14 PM Apr 30, 2024 IST | prashanth
ಟಿ 20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ  ಕನ್ನಡಿಗ ಕೆ ಎಲ್ ರಾಹುಲ್ ಗೆ ಇಲ್ಲ ಸ್ಥಾನ

ನವದೆಹಲಿ,ಏಪ್ರಿಲ್,30,2024 (www.justkannada.in): ಜೂನ್ ನಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದೆ.

ಜೂನ್ 1 ರಿಂದ 29 ರವರೆಗೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು,  ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದ ನಾಯಕರಾದರೇ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಏಕದಿನ ವಿಶ್ವಕಪ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ  ಕನ್ನಡಿಗ ಕೆ. ಎಲ್ ರಾಹುಲ್ ಟಿ-20 ವಿಶ್ವಕಪ್ ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಸಂಪೂರ್ಣ ತಂಡ ಹೀಗಿದೆ.

ರೋಹಿತ್  ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ವಿರಾಟ್ ಕೊಹ್ಲಿ,  ಸೂರ್ಯಕುಮಾರ್ ಯಾದವ್,  ರಿಷಬ್ ಪಂತ್, ಯಶಸ್ವಿ ಜೈಸ್ವಾಲ್,  ಸಂಜು ಸ್ಯಾಮ್ಸನ್,  ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ,  ಕುಲ್ ದೀಪ್ ಯಾದವ್,  ಯಜುವೆಂದ್ರ ಚಹಲ್, ಜಸ್ಪ್ರಿತ್ ಬೂಮ್ರಾ,  ಹರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಗೆ ಸ್ಥಾನ ಸಿಕ್ಕದೆ.

Key words: Indian, team, announced, T-20 World Cup

Tags :

.