For the best experience, open
https://m.justkannada.in
on your mobile browser.

ಲೋಕಸಭೆ 2024 : ಭಾರತದ ಅತ್ಯಂತ ಕಿರಿಯ ಸಂಸದೆ ಶಾಂಭವಿ ಚೌಧರಿ.

04:14 PM Jun 05, 2024 IST | mahesh
ಲೋಕಸಭೆ 2024   ಭಾರತದ ಅತ್ಯಂತ ಕಿರಿಯ ಸಂಸದೆ ಶಾಂಭವಿ ಚೌಧರಿ

Shambhavi Choudhary, the Lok Janshakti Party (LJP) leader, has become the youngest Member of Parliament in India. She has won the Lok Sabha elections from Bihar's Samastipur district.

ನವ ದೆಹಲಿ, ಜೂ.05,2024: (www.justkannada.in news) ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ,   ಭಾರತದ ಅತ್ಯಂತ ಕಿರಿಯ ಸಂಸತ್ ಸದಸ್ಯೆ. ಅವರು ಬಿಹಾರದ ಸಮಸ್ತಿಪುರ್ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 187251 ಮತಗಳಿಂದ ಸೋಲಿಸಿ ಸಂಸತ್ತಿಗೆ ಆಯ್ಕೆಗೊಂಡಿದ್ದಾರೆ.

"ನಾನು ಸಮಸ್ತಿಪುರದ ಜನರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನಾನು ಹೇಳುತ್ತೇನೆ ಮತ್ತು ಅವರ ನಿರೀಕ್ಷೆಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ. ಸಮಸ್ತಿಪುರ ನನಗೆ ದೊಡ್ಡ ವಿಜಯವನ್ನು ನೀಡಿದೆ ಮತ್ತು ಜನರು ನನಗೆ ಬೆಂಬಲಿಸಿದ್ದಾರೆ. ಮಾತ್ರವಲ್ಲದೆ ಅವರ ಹೃದಯದಲ್ಲಿ ನಾನು ಮಗಳಾಗಿ ಆಶೀರ್ವಾದ ಪಡೆಯಲು ಬಂದಿದ್ದೇ. ಇಂದು ಅವರು ನನ್ನನ್ನು ತಮ್ಮ ಮಗಳಾಗಿ ಸ್ವೀಕರಿಸಿದ್ದಾರೆ ಎಂದು ಶಾಂಭವಿ ಚೌಧರಿ ಭಾವನಾತ್ಮಕವಾಗಿ ಧನ್ಯವಾದ ಹೇಳಿದ್ದಾರೆ

ಶಾಂಭವಿ ಚೌಧರಿ ಯಾರು?

ಶಾಂಭವಿ ಚೌಧರಿ ಅವರಿಗೆ ಕೇವಲ 25 ವರ್ಷ. ಆಕೆ ಮೂರನೇ ತಲೆಮಾರಿನ ರಾಜಕಾರಣಿ.

ಶಾಂಭವಿ ಚೌಧರಿ ಅವರ ತಂದೆ ಅಶೋಕ್ ಚೌಧರಿ ಜೆಡಿಯು ನಾಯಕರಾಗಿದ್ದಾರೆ. ನಿತೀಶ್ ಕುಮಾರ್ ಅವರ ಸಂಪುಟದ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರು. ಆಕೆಯ ತಂದೆ ಕಾಂಗ್ರೆಸ್‌ನಿಂದ ಜೆಡಿಯುಗೆ ಸೇರ್ಪಡೆಗೊಂಡಿದ್ದರು.

ಶಾಂಭವಿ ಚೌಧರಿ ಅವರ ಅಜ್ಜ ದಿವಂಗತ ಮಹಾವೀರ ಚೌಧರಿ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದರು. ಪಕ್ಷ ಬಿಹಾರದಲ್ಲಿ ಆಡಳಿತ ನಡೆಸಿದಾಗ ಅವರು ರಾಜ್ಯ ಸಚಿವರಾಗಿದ್ದರು. ಬಿಹಾರದಲ್ಲಿ ನಡೆದ ರ್ಯಾಲಿಯಲ್ಲಿ ಆಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದರು.

ಶಾಂಭವಿ ಚೌಧರಿ ಅವರು ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಮಾಸ್ಟರ್ಸ್ ಆಫ್ ಆರ್ಟ್ಸ್ (ಸಮಾಜಶಾಸ್ತ್ರ) ಅಭ್ಯಾಸಿಸಿದ್ದಾರೆ.

"ನನಗೆ ರಾಜಕೀಯ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸವಲ್ಲ. ನನಗೆ ರಾಜಕೀಯಕ್ಕೆ ಸೇರುವುದು ನಾನು ಅಧ್ಯಯನ ಮಾಡಿದ ಎಲ್ಲ ವಿಷಯಗಳ ಪ್ರಾಯೋಗಿಕ ಅನುಭವವನ್ನು ಪಡೆಯುವುದು. ನನ್ನ ಶೈಕ್ಷಣಿಕ ಹಿನ್ನೆಲೆಯು ನನ್ನ ಪ್ರದೇಶದ ಜನರು ಎದುರಿಸುತ್ತಿರುವ ತೊಂದರೆಗಳನ್ನು ಗುರುತಿಸಲು ನನಗೆ ಸಹಾಯ ಮಾಡುತ್ತದೆ. ಮತ್ತು ಅವುಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಚೌಧರಿ ಹೇಳಿದ್ದಾರೆ.

ಕೃಪೆ: ಹಿಂದೂಸ್ತಾನ್ ಟೈಮ್ಸ್

key words: Shambhavi Choudhary, India's youngest MP

SUMMARY: 

Shambhavi Choudhary, the Lok Janshakti Party (LJP) leader, has become the youngest Member of Parliament in India. She has won the Lok Sabha elections from Bihar's Samastipur district.

She defeated the Congress party's candidate, Sunny Hazari, by 187251 votes.

"I extend my wishes to the people of Samastipur. I would say that they have taken the right decision, and I will try to live up to their expectations. Samastipur has given me a big victory, and I believe that the people have given me a place in their heart. I had said that I have come here to seek blessings as a daughter and today they have accepted me as their daughter," Shambhavi Choudhary told PTI after her victory.

Tags :

.