HomeBreaking NewsLatest NewsPoliticsSportsCrimeCinema

ಕೇಂದ್ರದ ಮಧ್ಯಂತರ ಬಜೆಟ್ ಬಗ್ಗೆ ಕೈಗಾರಿಕೋದ್ಯಮಿಗಳಿಂದ ಬೇಸರ.

03:49 PM Feb 01, 2024 IST | prashanth

ಮೈಸೂರು,ಫೆಬ್ರವರಿ,1,2024(www.justkannada.in):  ಇಂದು ಮಂಡನೆಯಾದ  ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಗೆ ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಮೈಸೂರಿನಲ್ಲಿ ಮಾತನಾಡಿರುವ  ಕೈಗಾರಿಕೋದ್ಯಮಿ ಸುರೇಶ್ ಕುಮಾರ್ ಜೈನ್, ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್, ನೀರಸ, ನಿರಾಶದಾಯಕ, ಉಪ್ಪು, ಉಳಿ, ಸಿಹಿ, ಕಹಿ ಏನು ಇಲ್ಲದ ಬಜೆಟ್. ಚುನಾವಣೆ ಪೂರ್ವ ಬಜೆಟ್ ಆಗಿದ್ದ ಕಾರಣ ಕೈಗಾರಿಕೋದ್ಯಮಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಸೂಕ್ಷ್ಮ ಕೈಗಾರಿಕೆಗಳಿಗೆ ಹೊಸ ಕೈಗಾರಿಕೆ ನೀತಿ ತರ್ತಾರೆ. ಮೈಸೂರಿಗೆ ಸಂಸದರು ಒತ್ತಡ ಹಾಕಿ ಕೈಗಾರಿಕಾ ಕ್ಲಸ್ಟರ್ ತರುತ್ತಾರೆ. ಮೈಸೂರನ್ನ ಸ್ಮಾರ್ಟ್ ಸಿಟಿ ಮಾಡುತ್ತಾರೆ ಎಂಬ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಯಾವುದೇ ಹೊಸ ಯೋಜನೆಗಳನ್ನ ಘೋಷಣೆ ಮಾಡಿಲ್ಲ.ಇರುವಂತಹ ಸರ್ಕಾರಿ ನೀತಿಗಳಿಗೆ ಪೌಡರ್ ಸ್ನೋವ್ ಹಚ್ಚಿ ಮಂಕು ಬೂದಿ ಎರಚಿದ್ದಾರೆ ಎಂದು ಟೀಕಿಸಿದರು.

ಈ ಬಜೆಟ್ ನಲ್ಲಿ ಏನೇನು ಇಲ್ಲಾ. ಇವರಿಗೆ ನಿಜಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭರವಸೆ ಇದ್ದರೆ ಸಾಕಷ್ಟು ಯೋಜನೆಗಳನ್ನ ಜಾರಿ ಮಾಡಿ ಪೂರ್ಣವಧಿ ಬಜೆಟ್ ಮಂಡನೆ ಮಾಡಬಹುದಿತ್ತು. ಈಗ ಮಂಡನೆ ಮಾಡಿರುವ ಬಜೆಟ್ ಎಲ್ಲಾ ಉದ್ಯಮಗಳಿಗೂ ನಿರಾಸೆ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

Key words: Industrialists - fed up - Central- interim budget.

Tags :
Industrialists - fed up - Central- interim budget.
Next Article