For the best experience, open
https://m.justkannada.in
on your mobile browser.

ಕಾವೇರಿ ವಿಚಾರದಲ್ಲಿ ಅನ್ಯಾಯ: ಕೂಡಲೇ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ.

05:15 PM Dec 21, 2023 IST | prashanth
ಕಾವೇರಿ ವಿಚಾರದಲ್ಲಿ ಅನ್ಯಾಯ  ಕೂಡಲೇ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಮೈಸೂರು,ಡಿಸೆಂಬರ್,21,2023(www.justkannada.in):  ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಡಬ್ಲ್ಯೂಆರ್ ಸಿ  ಮತ್ತೆ  ಆದೇಶ ಹಿನ್ನೆಲೆ,  ಕಾವೇರಿ ವಿವಾದ ವಿಚಾರದಲ್ಲಿ ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.  ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರದ ಮತ್ತು ಕಾವೇರಿ ನ್ಯಾಯಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರಿ ನಿರ್ವಹಣಾ ಮಂಡಳಿ ತಮಿಳುನಾಡು ಸರ್ಕಾರದ ಏಜೆಂಟ್ ರೀತಿ ವರ್ತಿಸುತ್ತಿದೆ. ಪ್ರತಿ ಬಾರಿಯೂ ಕೂಡ ಕರ್ನಾಟಕಕ್ಕೆ ಬಹಳ ಅನ್ಯಾಯ ಮಾಡುತ್ತಿದೆ. ಈ ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿ ರಾಜೀನಾಮೆ ನೀಡಲಿ.

ಸಂಸತ್ ಭವನದ ಭದ್ರತಾ ಲೋಪ ಬಹಳ ಖಂಡನೀಯ. ಇದರ ಹೊಣೆ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಹೊತ್ತು ರಾಜೀನಾಮೆ ನೀಡಿದ್ದರೇ ಒಳ್ಳೆಯ ಗೌರವ ಸಿಗುತ್ತಿತ್ತು. ಒಬ್ಬ ಸಾಮಾನ್ಯ ವ್ಯಕ್ತಿ ಅಷ್ಟು ದೊಡ್ಡ ಮಟ್ಟದ ಭದ್ರತೆ ಭೇದಿಸಿ ಹೇಗೆ ಒಳ ನುಸುಳಿದರು.? ಇದು ಲೋಕಸಭೆಯಲ್ಲಿನ‌ ದೊಡ್ಡ ಭದ್ರತಾ ಲೋಪ. ಈ ಕೂಡಲೇ ಪ್ರಧಾನಿ ಮಂತ್ರಿ ರಾಜೀನಾಮೆ ನೀಡಬೇಕು ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಮಾನದ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್,  ಟಿಪ್ಪು ಒಬ್ಬ ನಮ್ಮ ನಾಡೀನ ವೀರ ಬ್ರಿಟಿಷರ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನೇ ಒತ್ತೆ ಇಟ್ಟ ವ್ಯಕ್ತಿ. ಈ ನಾಡಿಗೆ ಟಿಪ್ಪು ಕೊಡುಗೆ ಅಪಾರ. ಮೈಸೂರು ಮಹಾರಾಜರ ಹೆಸರು ಎಲ್ಲಾ ಕಡೆ ಇದೆ. ನನ್ನ ಅಭಿಪ್ರಾಯದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಟ್ಟರೆ ನನ್ನ ಸಹಮತ ಇದೆ ಎಂದು  ಟಿಪ್ಪು ಪರ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಬ್ಯಾಟ್ ಬೀಸಿದರು.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾದರೇ ಸಂತೋಷ.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾದರೆ ಮೊದಲು ಸಂತೋಷ ಪಡುವವನು ನಾನು. ಅವರು ಒಬ್ಬ ಕನ್ನಡಿಗ,ಒಬ್ಬ ಹಿರಿಯ ರಾಜಕಾರಣಿ. ಕೇಂದ್ರ ಸರ್ಕಾರದ ವಿಪಕ್ಷ ನಾಯಕನಾಗಿ ಒಬ್ಬ ಉತ್ತಮ ಸಂಸದೀಯ ಪಟು. ಮುಂದೆ ಈ ದೇಶದ ಪ್ರಧಾನಿಯಾದರೆ ನನ್ನ ಸಂಪೂರ್ಣ ಸಹಮತ ಇದೆ. ಬಹಳ ಸಂತೋಷ.ಪ್ರಧಾನಿಯಾಗುವ ಎಲ್ಲಾ ಅರ್ಹತೆ ಅವರಿಗಿದೆ ಎಂದರು.

Key words: Injustice - Cauvery issue- Watal Nagaraj- protests –water- release.

Tags :

.