For the best experience, open
https://m.justkannada.in
on your mobile browser.

ಕಡಿಮೆ ಹಣ ಕೊಟ್ಟು ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ- ಸಚಿವ ಕೃಷ್ಣಭೈರೇಗೌಡ ಅಸಮಾಧಾನ.

01:29 PM Apr 27, 2024 IST | prashanth
ಕಡಿಮೆ ಹಣ ಕೊಟ್ಟು ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ  ಸಚಿವ ಕೃಷ್ಣಭೈರೇಗೌಡ ಅಸಮಾಧಾನ

ಬೆಂಗಳೂರು,ಏಪ್ರಿಲ್,27,2024 (www.justkannada.in): ರಾಜ್ಯಕ್ಕೆ ಕೇಂದ್ರ ಸರ್ಕಾರ 3,454 ಕೋಟಿ ರೂ. ಬರಪರಿಹಾರ ಬಿಡುಗಡೆ ಮಾಡಿದ್ದು ಈ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಸರ್ಕಾರ ಕಡಿಮೆ ಹಣಕೊಟ್ಟು ಕರ್ನಾಟಕಕ್ಕೆ ಅನ್ಯಾಯ  ಮಾಡಿದೆ. ಬರಪರಿಹಾರ ಘೋಷಣೆ ಬಗ್ಗೆ ಅಧಿಕೃತವಾಗಿ ಪತ್ರ ಬಂದಿಲ್ಲ. ಕೋರ್ಟ್ ಮೊರೆ ಹೋಗದಿದ್ರೆ ಈ ಹಣವೂ ಬರುತ್ತಿರಲಿಲ್ಲ ಎಂದರು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಹೆಚ್ಚು ತೆರಿಗೆ ಕಟ್ಟುತ್ತದೆ.  ನಮಗೆ ಕೇಂದ್ರ ನಿರಂತರವಾಗಿ ವಂಚನೆ ಮಾಡುತ್ತಾ ಬಂದಿದೆ. ಭೀಕರ ಬರಗಾಲ ಇದ್ದರೂ ಕೇಳಿದಷ್ಟು ಪರಿಹಾರ ನೀಡಿಲ್ಲ ಎಂದು ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬರ ಪರಿಹಾರ ಹಣ ರೈತರ ಅಕೌಂಟ್ ಗೆ ಹಾಕುತ್ತೇವೆ . 10 ದಿನಗಳೊಳಗೆ ರೈತರ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.

Key words: Injustice, Karnataka, Krishnabhaire Gowda

Tags :

.