ದಕ್ಷಿಣ ಭಾರತಕ್ಕೆ ಅನ್ಯಾಯ: ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ- ಸಂಸದ ಡಿ.ಕೆ ಸುರೇಶ್.
ನವದೆಹಲಿ ,ಫೆಬ್ರವರಿ,1,2024(www.justkannada.in): ಇಂದು ಮಂಡನೆಯಾದ ಕೇಂದ್ರ ಮಧ್ಯಂತರ ಬಜೆಟ್ ಕುರಿತು ಪ್ರತಿಕ್ರಿಯಿಸುವ ವೇಳೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಈ ಬಜೆಟ್ ನಲ್ಲಿ ಚುನಾವಣೆಗೆ ಸಂಬಂಧಪಟ್ಟ ಕೆಲ ಘೋಷಣೆ ಆಗಿವೆ. ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ. ಬೇಡಿಕೆ ಇಡಬೇಕಾದ ಅನಿವಾರ್ಯತೆಯನ್ನ ಹಿಂದಿಯವರು ಹೇರುತ್ತಿದ್ದಾರೆ. ಅನ್ಯಾಯವಾಗುತ್ತಿರುವುದನ್ನ ನೋಡುತ್ತಿದ್ದೇವೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಪ್ರತ್ಯೇಕ ಕೂಗು ಎತ್ತಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ದಕ್ಷಿಣ ಭಾರತದ ಹಣವನ್ನು ದಕ್ಷಿಣ ಭಾರತಕ್ಕೆ ಖರ್ಚು ಮಾಡಬೇಕು . ನಮ್ಮ ರಾಜ್ಯದ ಹಣವನ್ನ ನಮ್ಮ ರಾಜ್ಯಕ್ಕೆ ಕೊಟ್ಟರೇ ಸಾಕು ಎಂದರು.
Key words: Injustice - South India- need - separate nation- MP -DK Suresh.