ಮಹಿಳೆಯರಿಗೆ ಅಪಮಾನ ಆರೋಪ: ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್.ಡಿಕೆ
ಬೆಂಗಳೂರು,ಏಪ್ರಿಲ್,15,2024 (www.justkannada.in): ಗ್ಯಾರೆಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಇದೀಗ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ವಿಷಾದಿಸುತ್ತೇನೆ ಎಂದಿದ್ದಾರೆ. ಗ್ಯಾರಂಟಿಗಳಿಗೆ ಮಾರುಹೋಗಿ ದಾರಿತಪ್ಪಬೇಡಿ ಎಂದಿದ್ದೇನೆ. ದಾರಿ ತಪ್ಪಿದ್ದಾರೆ ಎಂದರೇ ಅಶ್ಲೀಲ ಪದನಾ..? ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರಂತೆ. ನನಗೆ ನೋಟಿಸ್ ಕೊಡಲಿ ಉತ್ತರ ನೀಡುತ್ತೇನೆ ಎಂದರು.
ನಾನು ಮಹಿಳೆಗೆ ಅಪಮಾನ ಮಾಡಿಲ್ಲ. ಕೆಲವು ಹೆಣ್ಣು ಮಕ್ಕಳನ್ನಅಪಹರಿಸಿ ಜಮೀನು ಬರೆಸಿಕೊಂಡಿದ್ದಾರೆ. ಹೆಣ್ಣುಮಕ್ಕಳನ್ನ ಅಪಹರಿಸಿ ಜಮೀನು ಬರೆಸಿಕೊಂಡಾಗ ಕಣ್ಣೀರು ಬರಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹೆಚ್.ಡಿಕೆ ಗಂಭೀರ ಆರೋಪ ಮಾಡಿದರು.
ಇದು ಪಿಕ್ ಪಾಕೆಟ್ ಗ್ಯಾರಂಟಿ. ಸಚಿವರು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದರು. ನಿನ್ನೆ ಮಂಡ್ಯದಲ್ಲಿ ಮಹಿಳೆಯರನ್ನ ಕರೆ ತಂದು ಪ್ರತಿಭಟನೆ ಮಾಡಿದ್ರು. ಮಹಿಳೆಯರನ್ನ ಕೇಳಿದ್ರೆ ಹಣ ಕೊಟ್ರು ಪ್ರತಿಭಟನೆ ಮಾಡಿದ್ವಿ ಅಂದಿದ್ದಾರೆ ಎಂದು ಕಿಡಿಕಾರಿದರು.
ಹೆಚ್ ಡಿಕೆ ಬಳಿ ಸಾವಿರ ಎಕರೆ ಭೂಮಿ ಇದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ನನ್ನದು 48ಎಕರೆ ಭೂಮಿ ರಾಜಕಾರಣಕ್ಕೆ ಬರುವ ಮೊದಲೇ ನಾನು ಜಮೀನು ಖರೀದಿಸಿದ್ದೆ. 50 ಟನ್ ಕಲ್ಲಂಗಡಿ ಬೆಳೆದಿದ್ದೇನೆ. ವಿಡಿಯೋ ಮಾಡಿದ್ದೇನೆ. 55 ಲಕ್ಷ ಮೌಲ್ಯದ ಬಾಳೇ ಹಣ್ಣು ಬೆಳೆದಿದ್ದೇನೆ ಎಂದು ಟಾಂಗ್ ಕೊಟ್ಟರು.
Key words: insulting, women, H.D Kumaraswamy