HomeBreaking NewsLatest NewsPoliticsSportsCrimeCinema

ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ದೌರ್ಜನ್ಯ ತನಿಖೆಗೆ ಕಮಿಟಿ ರಚಿಸಿ- ಸಿಎಂಗೆ FIRE ನಿಯೋಗ ಮನವಿ

12:18 PM Sep 05, 2024 IST | prashanth

ಬೆಂಗಳೂರು,ಸೆಪ್ಟಂಬರ್,5,2024 (www.justkannada.in):  ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಅಧ್ಯಯನ ಮಾಡಿ ವರದಿ ನೀಡಲು ಕೇರಳದಂತೆ ರಾಜ್ಯದಲ್ಲೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಡ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (‍FIRE) ನಿಯೋಗ ಇಂದು  ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ.

ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗ, ಕರ್ನಾಟಕದಲ್ಲೂ'ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರ ಅನೇಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಮನವಿ ಸಲ್ಲಿಕೆ ಮಾಡಿತು. ಈ ವೇಳೆ ನಟಿಯರಾದ ಶೃತಿ ಹರಿಹರನ್, ನೀತು ಶೆಟ್ಟಿ ಅವರು ಉಪಸ್ಥಿತರಿದ್ದರು.

ಈ ಸಂಬಂಧ ನಿನ್ನೆ ಫೈರ್ ಸಂಸ್ಥೆಯೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿತ್ತು. ಕೇರಳ ಮಾದರಿಯಂತೆ ಕರ್ನಾಟಕದಲ್ಲೂ  'ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರ ಅನೇಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಪತ್ರದಲ್ಲಿ ಮನವಿ ಮಾಡಿತ್ತು. ಲಿಂಗ ಸಮಾನತೆ ಬೆಂಬಲಿಸುವ ಕನ್ನಡ ಚಲನಚಿತ್ರೋದ್ಯಮ ಮತ್ತು ವಿವಿಧ ಕ್ಷೇತ್ರಗಳ 153 ಗಣ್ಯರು ಈ ಮನವಿ ಪತ್ರಕ್ಕೆ ಸಹಿ ಹಾಕಿಬೆಂಬಲ ಸೂಚಿಸಿದ್ದರು.

ಕವಿತಾ ಲಂಕೇಶ್ ಅಧ್ಯಕ್ಷತೆಯ ಸಂಸ್ಥೆಯ ಈ ನಡೆಗೆ ನಟರಾದ ಸುದೀಪ್, ಕಿಶೋರ್, ದಿಗಂತ್, ಸಿಹಿ ಕಹಿ ಚಂದ್ರು, ವಿನಯ್ ರಾಜ್ ಕುಮಾರ್, ನಟಿಯರಾದ ಪೂಜಾ ಗಾಂಧಿ, ಶ್ರುತಿ ಹರಿಹರನ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಚೈತ್ರಾ ಜೆ.ಆಚಾರ್ಯ, ನಿರ್ದೇಶಕರಾದ ಬಿ.ಸುರೇಶ್, ಪವನ್ ಕುಮಾರ್, ಚೈತನ್ಯ ಕೆ.ಎಂ. ಗಿರಿರಾಜ್ ಬಿ.ಎಂ., ಜಯತೀರ್ಥ, ಸಾಹಿತಿಗಳಾದ ವಿಜಯ್ ಶಂಕರ್, ರಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ್, ಕಲಾವಿದರಾದ ವಿಜಯಮ್ಮ ಚಂಪಾ ಶೆಟ್ಟಿ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಕಲಾವಿದರು, ನಿರ್ದೇಶಕರು, ಲೇಖಕರು, ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದರು.

Key words: investigate, Sandalwood, FIRE delegation, CM Siddaramaiah

Tags :
CM SiddaramaiahFIRE delegationinvestigateSandalwood
Next Article