HomeBreaking NewsLatest NewsPoliticsSportsCrimeCinema

ಜಾತಿಜನಗಣತಿ ಮೂಲ ಪ್ರತಿ ನಾಪತ್ತೆ ಬಗ್ಗೆ ತನಿಖೆಯಾಗಲಿ- ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ.

04:19 PM Nov 23, 2023 IST | prashanth

ಬೆಂಗಳೂರು,ನವೆಂಬರ್,23,2023(www.justkannada.in):   ಜಾತಿ ಜನಗಣತಿ ಮೂಲಪ್ರತಿಯನ್ನ ಯಾರು ಕಳ್ಳತನ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಕಾಂತರಾಜ ವರದಿ ಹಲವು ಗೊಂದಲಗಳಿಗೆ ಕಾರಣವಾಗಿದ್ದು,  ಇದು ‌ಹತ್ತು ವರ್ಷದ ಹಳೆಯ ವರದಿಯಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದೆ, ಹೀಗಾಗಿ ವರದಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದರು.

ಕಾಂತರಾಜು ವರದಿಯಲ್ಲಿ ಕಾರ್ಯದರ್ಶಿ ಸಹಿ ಹಾಕಬೇಕು. ನಮ್ಮ‌ಅವಧಿಯಲ್ಲಿ ಸಹಿ ಹಾಕಲೇ ಇಲ್ಲ, ಈಗ ಕಾಂತರಾಜು ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ. 168 ಕೋಟಿ ಸರ್ಕಾರದ ಹಣ ಖರ್ಚು ಮಾಡಿ ಮಾಡಿರುವ ವರದಿ ಕಾಣೆಯಾಗಿದೆ ಅಂದ್ರೆ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ? ಕಾಣೆಯಾಗಿರುವ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಸರಿಯಾದ ಮಾನದಂಡವಾಗಿ ಸಮಿಕ್ಷೆ ಮಾಡಬೇಕು. ಅತೀ ಆತುರ, ಓವರ್ ಆಕ್ಷನ್ ಆಗಿ ಸಿದ್ದರಾಮಯ್ಯ ವರದಿ ಸ್ವೀಕಾರಕ್ಕೆ ಮುಂದಾಗಿದ್ದಾರೆ  ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

Key words: investigation - - caste census- source – missing-Opposition Leader- R. Ashok

Tags :
investigation - - caste census- source – missing-Opposition Leader- R. Ashok
Next Article