CAA ಅಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ ವಿತರಣೆ.
ನವದೆಹಲಿ, ಮೇ.15,2024 (www.justkannada.in): ಕೇಂದ್ರ ಸರ್ಕಾರ ಇಂದು 14 ಜನರಿಗೆ ಸಿಎಎ ಅಡಿಯಲ್ಲಿ ಮೊದಲ ಪೌರತ್ವ ಪ್ರಮಾಣಪತ್ರಗಳನ್ನು ವಿತರಣೆ ಮಾಡಿದೆ.
2024ರ ಪೌರತ್ವ (ತಿದ್ದುಪಡಿ) ನಿಯಮಗಳ ಅಧಿಸೂಚನೆಯ ನಂತರ ಮೊದಲ ಈ ಪ್ರಮಾಣಪತ್ರವನ್ನು ಹಸ್ತರಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇಂದು ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನವದೆಹಲಿಯಲ್ಲಿ ವಿತರಿಸಿದರು.
ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯನ್ನು ಹೊರಡಿಸಿದ ನಂತರ ಮೊದಲ ಬಾರಿಗೆ ಪೌರತ್ವ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ನವದೆಹಲಿಯಲ್ಲಿ ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.
ಸಿಎಎ ಅನ್ನು 2019ರಲ್ಲಿ ಸಂಸತ್ತು ಅಂಗೀಕರಿಸಿತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್‌ನಲ್ಲಿ ಸಿಎಎ ನಿಯಮಗಳನ್ನು ಸೂಚಿಸಿತು. ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಕೇಂದ್ರ ಸರ್ಕಾರವು ಮಾರ್ಚ್ 11 ರಂದು ಲೋಕಸಭೆ ಚುನಾವಣೆಯ ಮೊದಲು ಅಧಿಸೂಚನೆ ಮಾಡಿತು. ಭಾರತೀಯ ಪೌರತ್ವ ನೀಡಲು ಜಿಲ್ಲಾ ಮಟ್ಟದ ಸಮಿತಿಗಳಿಗೆ ಅಧಿಕಾರವನ್ನು ನೀಡಲಾಗಿತ್ತು. ಪೌರತ್ವವನ್ನು ನೀಡುವ ಮೊದಲು ಅರ್ಜಿಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದ ಅಧಿಕಾರ ಸಮಿತಿಗೆ ಅಧಿಕಾರ ನೀಡಲಾಗಿತ್ತು.
Key words: Issue, citizenship, certificate, 14 people, CAA