ಜನತಾದರ್ಶನ: ಮಧ್ಯಾಹ್ನ 3 ಗಂಟೆ ವೇಳೆಗೆ 1805 ಅರ್ಜಿಗಳ ಸ್ವೀಕಾರ.
04:26 PM Nov 27, 2023 IST
|
prashanth
ಬೆಂಗಳೂರು,ನವೆಂಬರ್,27,2023(www.justkannada.in): ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸುತ್ತಿದ್ದು ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರಕ್ಕೆ ಸೂಚನೆ ನೀಡುತ್ತಿದ್ದಾರೆ.
ಜನತಾ ದರ್ಶನಕ್ಕೆ ಸಮಸ್ಯೆ ಹೊತ್ತ ಜನಸಾಗರ ಹರಿದು ಬರುತ್ತಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟು 1805 ಅರ್ಜಿಗಳನ್ನ ಸಿಎಂ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ. ಈ ಪೈಕಿ 37 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ.
1070 ಅರ್ಜಿಗಳ ಇತ್ಯರ್ಥ ಬಾಕಿ ಇದೆ. ಜನತಾ ದರ್ಶನಕ್ಕಾಗಿ ವಿಶೇಷ ಚೇತನರು, ಹಿರಿಯ ನಾಗರಿಕರು ಸೇರಿದಂತೆ 20 ಕೌಂಟರ್ ಗಳನ್ನ ಮಾಡಲಾಗಿದೆ. 1000ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ. ಇಂದು, ಮೊದಲಿಗೆ ವಿಶೇಷ ಚೇತನರ ಕೌಂಟರ್ ಬಳಿ ತೆರಳಿದ ಸಿಎಂ ಸಿದ್ದರಾಮಯ್ಯ ಅಲ್ಲಿ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು.
Key words: Janatadarshan-CM Siddaramaiah-1805 applications -received - 3 pm.
Next Article