ಮಲ್ಲಿಗೆ ನಗರಿ ಮೈಸೂರಿನಲ್ಲಿ ಮಲ್ಲಿಗೆ ಹೂವಿಗೆ ಬರ: ಬೆಲೆ ಗಗನಕ್ಕೇರಿಕೆ..
ಮೈಸೂರು,ಫೆಬ್ರವರಿ,23,2024(www.justkannada.in): ಮಲ್ಲಿಗೆ ನಗರಿ ಮೈಸೂರಿನಲ್ಲಿ ಮಲ್ಲಿಗೆ ಹೂವಿಗೆ ಬರ ಬಂದಿದ್ದು ಮಲ್ಲಿಗೆ ಹೂವಿನ ದರ ಗಗನಕ್ಕೇರಿಕೆಯಾಗಿದೆ.
ಒಂದು ಕಡೆ ಬಿರು ಬೇಸಿಗೆ ಮತ್ತೊಂದು ಕಡೆ ಅನ್ ಸೀಸನ್, ಹೀಗಾಗಿ ಮಾರುಕಟ್ಟೆ ಮಲ್ಲಿಗೆ ಬರುತ್ತಿಲ್ಲ. ಇದರಿಂದಾಗಿ ಮಲ್ಲಿಗೆ ಹೂ ದರ ಏರಿಕೆಯಾಗಿ ಜನ ಸಾಮಾನ್ಯರ ಕೈಗೆಟುಕದಂತಾಗಿದೆ.
1 ಕೆ.ಜಿ ಮಲ್ಲಿಗೆ ಹೂವಿಗೆ 1 ಸಾವಿರದಿಂದ 1500 ಸಾವಿರಕ್ಕೆ ಏರಿಕೆಯಾಗಿದ್ದು ಮಲ್ಲಿಗೆ ಹೂವಿನ ದರ ಕೇಳಿ ಗ್ರಾಹಕರಿಗೆ ಗರ ಬಡಿದಂತಾಗಿದೆ. ವ್ಯಾಪಾರಸ್ಥರು ಒಂದು ಮೀಟರ್ ಮಲ್ಲಿಗೆಗೆ 100 ರಿಂದ 150 ರೂ ಮಾರಾಟ ಮಾಡುತ್ತಿದ್ದಾರೆ. ಬಿರು ಬೇಸಿಗೆ, ಬರಗಾಲದ ಮಲ್ಲಿಗೆ ಇಳುವರಿಯಲ್ಲಿ ಗಣನೀಯ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ಬೆಲೆ ಏರಿಕೆಯಾಗಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮಲ್ಲಿಗೆ ಕೊಂಡುಕೊಳ್ಳ ಬಂದವರು ಕಾಕಡ ಹೂವು ಮೊರೆ ಹೋಗುತ್ತಿದ್ದಾರೆ. ವಾರಾಂತ್ಯ, ಮದುವೆ, ಶುಭ ಸಮಾರಂಭಗಳ ಸಮಯದಲ್ಲಿ ಕೆ.ಜಿಗೆ 2 ಸಾವಿರಕ್ಕೂ ಏರುತ್ತದೆ ಎಂದು ಹೂವು ವ್ಯಾಪಾರಿಗಳು ಹೇಳುತ್ತಿದ್ದಾರೆ.
Key words: jasmine flower – Mysore- price -hike