For the best experience, open
https://m.justkannada.in
on your mobile browser.

JK UPDATE ಅಮಿತ್‌ ಶಾ ಭೇಟಿ ಹಿನ್ನೆಲೆ : ಚಾಮುಂಡಿ ಬೆಟ್ಟದಲ್ಲಿ ನಾಳೆ ನಿರ್ಬಂಧ.

04:18 PM Feb 10, 2024 IST | mahesh
jk update ಅಮಿತ್‌ ಶಾ ಭೇಟಿ ಹಿನ್ನೆಲೆ   ಚಾಮುಂಡಿ ಬೆಟ್ಟದಲ್ಲಿ ನಾಳೆ ನಿರ್ಬಂಧ

ಮೈಸೂರು, ಫೆ.೧೦, ೨೦೨೪ : (justkannada ̤ in news ) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ನಾಳೆ ಚಾಮುಂಡಿಬೆಟ್ಟದಲ್ಲಿ ಸಾರ್ವಜನಿಕರಿಗೆ ಕೆಲಕಾಲ ನಿರ್ಬಂಧ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇಂದು ರಾತ್ರಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವತೆ ಚಾಮುಂಡಿ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಕೆಲಕಾಲ ನಿರ್ಬಂಧ ವಿಧಿಸಲಾಗಿದೆ.

ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಡಾ.ರಮೇಶ್‌ ಬಾನೋತ್‌  ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿ, ವಿಐಪಿ ಮೂಮೆಂಟ್ಸ್‌ ಇರುವ ಕಾರಣ ಸೆಕ್ಯೂರಿಟಿ ಹಿನ್ನೆಲೆಯಲ್ಲಿ ಕೆಲ ಸಮಯ ಅಲ್ಪಮಟ್ಟಿನ ನಿರ್ಬಂಧ ವಿಧಿಸಲಾಗುತ್ತದೆ.

ನಾಳೆ ಬೆಳಗ್ಗೆ ೧೦ ರಿಂದ ೧೧. ೩೦ ರ ತನಕ ಸಾರ್ವಜನಿಕರಿಗೆ ಬೆಟ್ಟಕ್ಕೆ ತೆರಳಲು ನಿರ್ಬಂಧವಿರುತ್ತದೆ. ಈ ಸಮಯ ಹೊರತು ಪಡಿಸಿದ ಬಳಿಕ ಎಂದಿನಂತೆ ಭಕ್ತರು ಬೆಟ್ಟಕ್ಕೆ ತೆರಳಬಹುದು.

ಜೆಕೆ ಸಲಹೆ  : ರಕ್ಷಣೆಯ ಸಲುವಾಗಿ ಪೊಲೀಸರು ಕೈಗೊಂಡಿರುವ ಭದ್ರತಾ ದೃಷ್ಠಿಯಿಂದ  ಸಾರ್ವಜನಿಕರು ಭಾನುವಾರ ಬೆಳಗ್ಗೆ ೧೧. ೩೦ ರ ನಂತರ ದೇವಿ ದರ್ಶನಕ್ಕೆ ಬೆಟ್ಟಕ್ಕೆ ತೆರಳುವುದು ಸೂಕ್ತ.

Key words : mysore ̲  chamundi ̲ hills ̲home ̤ minister ̲ amith ̲ sha ̲ visits ̲ restriction ̲ publics

Tags :

.