HomeBreaking NewsLatest NewsPoliticsSportsCrimeCinema

ಬಜೆಟ್ ನಲ್ಲಿ ಎಲ್ಲಾ ಸಮುದಾಯಕ್ಕೆ ನ್ಯಾಯ: ರೈತರು, ಮಹಿಳಾ ಸಬಲೀಕರಣಕ್ಕೆ ಬದ್ಧ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

01:01 PM Jul 27, 2024 IST | prashanth

ಹೈದರಾಬಾದ್,ಜುಲೈ,27,2024 (www.justkannada.in): ಬಜೆಟ್ ನಲ್ಲಿ ಎಲ್ಲಾ ಸಮುದಾಯಕ್ಕೆ ನ್ಯಾಯ ಒದಗಿಸಲಾಗಿದೆ. ಯುವಕರು ರೈತರು, ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.

ಹೈದರಾಬಾದ್ ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 3ನೇ ಬಾರಿ ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. 10 ವರ್ಷಗಳ ಕಾಲ  ಯಶಸ್ವಿ ಆಡಳಿತ ನೀಡಿದ್ದೇವೆ. ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ.  ಬಜೆಟ್ ನಲ್ಲಿ ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಲಾಗಿದೆ ಎಂದರು.

ಬಡತನದ ವಿರುದ್ದ ಸರ್ಕಾರ ಪ್ರಬಲವಾಗಿ ಹೋರಾಟ ಮಾಡುತ್ತಿದೆ. ದೇಶದ ಆರ್ಥಿಕತೆ ವೇಗದ ಗತಿಯಲ್ಲಿ ಸಾಗುತ್ತಿದೆ. ಹಣದುಬ್ಬರ ನಿಯಂತ್ರಿಸಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.  ದೇಶದ 20 ಕಡೆ ರೈಲ್ವೆ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದೆ.  ಕೃಷಿ ಕೈಗಾರಿಕೆಗೆ ಗ್ರಾಮೀಣಾಭಿವೃದ್ದಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರಧಾನಮಂತ್ರಿ  ಅವಾಜ್ ಯೋಜನೆಯಡಿ ಮನೆ ನಿರ್ಮಾಣ  ಮಾಡಲಾಗುತ್ತಿದೆ.  ಬಡವರು ಮಧ್ಯಮ ವರ್ಗದ ಜನರಿಗೆ ಮನೆಗಳನ್ನ ಹಂಚಲಾಗಿದೆ. ಜಿಎಸ್ ಟಿ ಪರಿಹಾರ ಸೇರಿ ಹಲವು ಅನುದಾನ ನೀಡಲಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Justice, all communities, budget, Union Minister, Prahlad Joshi

Tags :
all communitiesbudgetjusticePrahlad Joshi.Union minister
Next Article