For the best experience, open
https://m.justkannada.in
on your mobile browser.

ಜ.13ರ ಕೆ-ಸೆಟ್ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ: ಈ ನಿಯಮಗಳ ಪಾಲನೆ ಕಡ್ಡಾಯ

12:29 PM Jan 04, 2024 IST | prashanth
ಜ 13ರ ಕೆ ಸೆಟ್ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ  ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು,ಜನವರಿ,4,2024(www.justkannada.in): ಜನವರಿ 13 ರಂದು ನಡೆಯಲಿರುವ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) ಕರ್ನಾಟಕ ಪರೀಕ್ಷೆ ಪ್ರಾಧಿಕಾರ(KEA) ವಸ್ತ್ರ ಸಂಹಿತೆ, ಮಾರ್ಗಸೂಚಿಯನ್ನ ಪ್ರಕಟಿಸಿದೆ.

ಜನವರಿ 13 ರಂದು ಬೆಳಗ್ಗೆ 10 ರಿಂದ 11 ಮತ್ತು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಕೆ-ಸೆಟ್ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಸರಳ ಉಡುಪು ಧರಿಸಿ ಬರುವಂತೆ ಸೂಚನೆ ನೀಡಿದೆ.

ಅಭ್ಯರ್ಥಿಗಳು KEA  ವೆಬ್ ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‌ ಲೋಡ್‌ ಕೊಳ್ಳಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಪ್ರವೇಶ ಪತ್ರದ ಜೊತೆಗೆ ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದೇ ಸರ್ಕಾರದ ಮಾನ್ಯತೆಯ ಗುರುತಿನ ಚೀಟಿ ತರಬೇಕು.

ಪರೀಕ್ಷೆಗೆ ಹಾಜರಾಗುವ ಪುರುಷ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ..

ಅರೆತೋಳಿನ ಅಂಗಿ, ಹೆಚ್ಚಿನ ಚೇಬುಗಳಿಲ್ಲದ ಸರಳ ಪ್ಯಾಂಟ್‌ ಧರಿಸಿ ಬರುವುದು ಕಡ್ಡಾಯ.

ಪರೀಕ್ಷೆ ವೇಳೆ ಬೆಲ್ಟ್‌, ಶೂಗಳನ್ನು ನಿಷೇಧಿಸಲಾಗಿದೆ. ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕೈ ಗಡಿಯಾರ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನ  ತರುವಂತಿಲ್ಲ.

ಮಹಿಳಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ ಹೀಗಿದೆ...

ಹೂ, ಬ್ರೂಚ್‌, ಬಟನ್‌, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್‌ ಪ್ಯಾಂಟ್‌ ಹಾಗೂ ಶೂ, ದಪ್ಪ ಸೋಲ್‌ ನ ಚಪ್ಪಲಿ ಧರಿಸಿ ಬರುವಂತಿಲ್ಲ.

ಪೆನ್‌ ಡ್ರೈವ್‌, ಕೈಗಡಿಯಾರ, ಮೈಕ್ರೋ ಫೋನ್‌ ಸೇರಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತರುವಂತಿಲ್ಲ. ಆದರೆ ಮಂಗಳಸೂತ್ರ, ಕಾಲುಂಗುರ ಧರಿಸಲು ಪ್ರಾಧಿಕಾರ ಅವಕಾಶ ನೀಡಿದೆ.

Key words: K-SET exam- Jan 13- KEA- Guidelines - announced

Tags :

.