ಕೆ-ಸೆಟ್ ಫಲಿತಾಂಶ ಪ್ರಕಟ : 6,675 ಮಂದಿ ಅರ್ಹ
Bengaluru: Provisional result of Assistant Professor Eligibility Test (K-SET) has been declared and 6,675 candidates have qualified.
ಬೆಂಗಳೂರು, ಮೇ.29, 2024: (www.justkannada.in news) ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶ ಪ್ರಕಟ. 6,675 ಅಭ್ಯರ್ಥಿಗಳು ಅರ್ಹತೆ.
ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 41 ವಿಷಯಗಳಿಗೆ ಕಳೆದ ಜ.13ರಂದು ಪರೀಕ್ಷೆ ನಡೆಸಲಾಗಿತ್ತು. 95,201 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಅರ್ಹತೆ ಪಡೆದವರಲ್ಲಿ 3,398 ಪುರುಷರು ಹಾಗೂ 3,180 ಮಹಿಳೆಯರು, 97 ಲಿಂಗತ್ವ ಅಲ್ಪ- ಸಂಖ್ಯಾತರು ಹಾಗೂ 350 ಮಂದಿ ಅಂಗವಿಕಲರು.
ಯುಜಿಸಿ ಹಾಗೂ ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಅರ್ಹತಾ, ಪಟ್ಟಿ ಸಿದ್ಧಪಡಿಸ ಲಾಗಿದೆ. ದಾಖಲೆಗಳ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳಿಗೆ ಇ- ಪ್ರಮಾಣ ಪತ್ರ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
key words: K-set result, 6,675 Candidates are eligible
SUMMARY:
Bengaluru: Provisional result of Assistant Professor Eligibility Test (K-SET) has been declared and 6,675 candidates have qualified.
Examination for 41 subjects of Arts, Science and Commerce was held on January 13.
95,201 candidates appeared for the exam. Among those eligible, 3,398 men and 3,180 are women, 97 are gender minorities. 350 disabled persons are included in this list.
Eligibility list is prepared as per UGC and state reservation rules. The Karnataka Examinations Authority has said that e-certificates will be issued to eligible candidates after verification of documents.