For the best experience, open
https://m.justkannada.in
on your mobile browser.

ಶತ್ರು ಭೈರವಿಯಾಗ: ಡಿಕೆ ಶಿವಕುಮಾರ್ ಆರೋಪ ಕುರಿತು ಕೇರಳ ಸರ್ಕಾರ ಸ್ಪಷ್ಟನೆ.

01:43 PM Jun 01, 2024 IST | prashanth
ಶತ್ರು ಭೈರವಿಯಾಗ  ಡಿಕೆ ಶಿವಕುಮಾರ್ ಆರೋಪ ಕುರಿತು ಕೇರಳ ಸರ್ಕಾರ ಸ್ಪಷ್ಟನೆ

ಮಂಗಳೂರು, ಜೂ,1,2024 (www.justkannada.in):  ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ​ ಆರೋಪಕ್ಕೆ ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಕುರಿತು ತನಿಖೆ ನಡೆಸಿದ ಕೇರಳ ಸರ್ಕಾರ,  ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರುಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದೆ.

ಕೇರಳ ಸರ್ಕಾರ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಮೂಲಕ ಕಣ್ಣೂರು, ತಳಿಪರಂಬ ಭಾಗದಲ್ಲಿ ವಿಶೇಷ ತನಿಖೆ ನಡೆಸಿದ್ದು. ಸಮಗ್ರ ತನಿಖೆ ನಡೆಸಿದ ತನಿಖಾ ದಳ ಕೇರಳದ ಡಿಜಿಪಿ ಅವರಿಗೆ ವರದಿ ಸಲ್ಲಿದೆ. ವರದಿಯಲ್ಲಿ ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ತಿಳಿಸಿದೆ.

ಕಳೆದ ಎರಡು ದಿನಗಳ ಹಿಂದೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ. ಪಂಚಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು.

Key words: DK Sivakumar, Satru Bhairaviyaga, Kerala govt

Tags :

.