For the best experience, open
https://m.justkannada.in
on your mobile browser.

ದಕ್ಷಿಣ ಶಿಕ್ಷಕರ ಕ್ಷೇತ್ರ : ಮೈತ್ರಿಗೆ ಇತಿಶ್ರೀ , ಬಂಡಾಯವೆದ್ದ ಕೆಟಿಶ್ರೀ..!

07:51 PM May 15, 2024 IST | mahesh
ದಕ್ಷಿಣ ಶಿಕ್ಷಕರ ಕ್ಷೇತ್ರ   ಮೈತ್ರಿಗೆ ಇತಿಶ್ರೀ   ಬಂಡಾಯವೆದ್ದ ಕೆಟಿಶ್ರೀ

ಮೈಸೂರು, ಮೇ,15, 2024: (www.justkannada.in news )ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ.  ವಿಧಾನಪರಿಷತ್  ಮಾಜಿ ಸದಸ್ಯ ಕೆ ಟಿ ಶ್ರೀಕಂಟೆಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದು. ಸ್ವಾಬಿಮಾನಿ ಶಿಕ್ಷಕರ ವೇದಿಕೆ ಪರವಾಗಿ ಅಖಾಡಕ್ಕೆ.

ಜೆಡಿಎಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡರಿಗೆ ಪಕ್ಷದ ಬಿಫಾರಂ ಕೈತಪ್ಪಿದ್ದು ಭಾರಿ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕುಂಚಿಟಿಗರ ಸಂಘದ ಆವರಣದಲ್ಲಿ ಶಿಕ್ಷಕರ ಸಭೆ ನಡೆಸಿ ತಮ್ಮ ಬೆಂಬಲಿಗರು ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಲಾಯಿತು.

ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಕೆಟಿಶ್ರೀ ಅವರಿಗೆ , ನೀವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು. ಜೆಡಿಎಸ್‌ ವರಿಷ್ಠರ ನಿರ್ಧಾರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು,  ಸ್ವಾಭಿಮಾನಿ ಶಿಕ್ಷಕರ ವೇದಿಕೆ ಪರವಾಗಿ ಕಣಕ್ಕಿಳಿಯುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೆ.ಟಿ.ಶ್ರೀಕಂಠೇಗೌಡ, ನನಗೆ ಪಕ್ಷ ಬಿ ಫಾರಂ ನಿರಾಕರಣೆ ಮಾಡಿದೆ. ಪಕ್ಷ ಏಕೆ ಇಂತಹ ನಿರ್ಣಯ ತೆಗೆದುಕೊಂಡಿದೆ ಗೊತ್ತಿಲ್ಲ.  ವಿಧಾನ ಪರಿಷತ್‌ ಚಿಂತಕರ ಚಾವಡಿ ಇದ್ದಂತೆ. ಇಲ್ಲಿಗೆ ಬುದ್ಧಿ ಜೀವಿಗಳು, ಪ್ರಗತಿಪರ ಚಿಂತಕರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಷಯ ತಿಳಿದಿದ್ದರು ಪಕ್ಷದ ವರಿಷ್ಠರು ನನಗೆ ಯಾಕೆ ಟಿಕೆಟ್‌ ಕೈ ತಪ್ಪಿಸಿದರೋ ಗೊತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಮರಿತಿಬ್ಬೇಗೌಡ ಅವರನ್ನು ಹಿರಿಯ ವಕೀಲ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹೆಚ್ ಎನ್ ವೆಂಕಟೇಶ ಮತ್ತು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಅಭಿನಂದಿಸಿ ಶುಭಕೋರಿದರು.

ಕಾಂಗ್ರೆಸ್ ಗೂ ಶಿಕ್ಷಕರಿಗೂ ಆಗಬರಲ್ಲ. ಇಲ್ಲಿಯವರೆಗೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಇಲ್ಲಿ ಚಿಹ್ನೆ ಇರಲ್ಲ ಶಿಕ್ಷಕರು ಆದ್ಯತೆಯ ಮತಗಳನ್ನು ಹಾಕಲಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೂ ಮತಹಾಕಬಹುದು. ಟಿಕೆಟ್ ಕೈತಪ್ಪಿರುವ ಕಾರಣ ಹೇಳಲಿಕ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇನೆ. ದಾಖಲೆಯನ್ನು ಇಟ್ಟಿದ್ದೇನೆ ಅದನ್ನು ಹೇಳಿದರೆ ಬೆಚ್ಚಿಬೀಳುತ್ತೀರಾ ಎಂದು ಮಾರ್ಮಿಕವಾಗಿ ನುಡಿದರು.

ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧ ಇಲ್ಲದವರಿಗೆ ಟಿಕೆಟ್ ಕೊಟ್ಟರೆ ಏನ್ ಅರ್ಥವಿದೆ ಎಂದು ವ್ಯಂಗ್ಯವಾಡಿದ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಮಾಧ್ಯಮ ಮುಖ್ಯಸ್ಥನಾಗಿ ದೇವೇಗೌಡರು, ಕುಮಾರಸ್ವಾಮಿ, ಪಕ್ಷವನ್ನ ಸಮರ್ಥನೆ ಮಾಡಿಕೊಂಡಿದ್ದೇನೆ. ಆದರೂ ನನ್ನನ್ನು ಕಡೆಗಣೆಸಿದ್ದು ಯಾಕೋ ಎಂದರು.

ಶಿಕ್ಷಕರು ಸ್ಪರ್ಧೆ ಮಾಡಲೇಬೇಕೆಂದು ಒತ್ತಾಯ ಮಾಡಿದ್ದಾರೆ. ಮಂಡ್ಯದಲ್ಲಿ ಇಂದು ಸಭೆ ನಡೆಸಿ ಬಳಿಕ ಹಾಸನ, ಚಾಮರಾಜನಗರದ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಬೆಂಬಲವನ್ನು ಕೋರುವೆ.

ಸ್ವಾಭಿಮಾನಿ ಶಿಕ್ಷಕರ ಪರವಾಗಿ ನಾನು ಅಖಾಡಕ್ಕೆ ಇಳಿಯುತ್ತಿದ್ದು, ಶಿಕ್ಷಕರ ಬೆಂಬಲವೇ ನನಗೆ ಶ್ರೀರಕ್ಷೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಹುತೇಕ ನಾಮಪತ್ರ ಸಲ್ಲಿಸುವುದು ಖಚಿತ ಎಂದು ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

key words:  The south teachers' constituency, Former MLC, K.T.Sreekantegowda , contesting as an independent candidate

SUMMARY: 

The south teachers' constituency ticket was lost.  Former MLC K T Sreekantegowda is contesting as an independent candidate. To the akhara on behalf of the Swabimani Teachers' Forum.

Speaking on the occasion, KT Srikantegowda said, "I have been denied B form by the party. I don't know why the party has taken such a decision.  The Legislative Council is like a think tank. Intellectuals and progressive thinkers are selected here. I don't know why the party high command denied me the ticket," he said.

Tags :

.