ಕೈ ತಪ್ಪಿದ ಬಿ ಫಾರಂ : ಸಂಜೆ ಶಿಕ್ಷಕರ ಸಭೆ ಕರೆದ ಕ.ಟಿ.ಶ್ರೀಕಂಠೇಗೌಡ, ಬಂಡಾಯದ ಮುನ್ಸೂಚನೆ..!
ಮೈಸೂರು, ಮೇ.15, 2024 : (www.justkannada.in news) ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪೈಕಿ ನಾನೊಬ್ಬನೇ ರಿಯಲ್ ʼ ಶಿಕ್ಷಕʼ ಎಂದ ಜೆಡಿಎಸ್ ನ ಕೆ.ಟಿ.ಶ್ರೀಕಂಠೇಗೌಡ , ಟಿಕೆಟ್ ಕೈ ತಪ್ಪಿದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡ ಇಂದು ಬೆಳಗ್ಗೆ ಬಿ ಫಾರಂ ನೀಡಿದರು. ಈ ವೇಲೆ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ ಟಿ ದೇವಗೌಡ, ನಿರಂಜನ್ ಮೂರ್ತಿ, ನಾಗಣ್ಣ ಗೌಡರು ಉಪಸ್ಥಿತರಿದ್ದರು.
ಜೆಡಿಎಸ್ ಹಾಗೂ ಬಿಜೆಪಿ ನಡುವೆ ʼ ಮೈತ್ರಿ ಅಭ್ಯರ್ಥಿ ʼ ಟಿಕೆಟ್ ಗೊಂದಲ ಮುಂದುವರೆದಿರುವ ಸಂದರ್ಭದಲ್ಲೇ ಜೆಡಿಎಸ್ ಬಿಫಾರಂ ನೀಡಿದೆ. ಬಿಜೆಪಿ ಅಭ್ಯರ್ಥಿ ಡಾ.ಈ.ಸಿ.ನಿಂಗರಾಜೇಗೌಡ ಅವರು ನಾನೇ ಮೈತ್ರಿ ಅಭ್ಯರ್ಥಿ. ನಾಮಪತ್ರ ಸಲ್ಲಿಸುವೆ ಎಂದು ಪ್ರಕಟಿಸಿದ್ದಾರೆ. ಈ ನಡುವೆ ಜೆಡಿಎಸ್ ನಲ್ಲೂ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ.
ಜೆಡಿಎಸ್ ನ ಬಿಫಾರಂ ನೀಡಿದ ಬೆನ್ನಲ್ಲೇ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಸಮಧಾನಗೊಂಡಿದ್ದಾರೆ. ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಕೆಟಿಎಸ್ ಹೇಳಿದಿಷ್ಟು..
ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಅರ್ಹತೆ ನನಗಿದೆ. ಹಾಗೆ ನೋಡಿದರೆ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ನನಗೆ ಹೆಚ್ಚು ಅರ್ಹತೆ ಇರುವುದು. ಕಾರಣ ನಾನು ಒಬ್ಬ ಶಿಕ್ಷಕ. ೬ ವರ್ಷಗಳ ಶಿಕ್ಷಕ ಅನುಭವದ ಜತೆಗೆ ಕಳೆದ ೨೯ ವರ್ಷಗಳಿಂದ ಪ್ರಾಂಶುಪಾಲರ ಸಂಘದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿರುವೆ. ಈ ಕ್ಷೇತ್ರದ ಸಂಪೂರ್ಣ ಆಗುಹೋಗುಗಳ ಬಗ್ಗೆ ಸಮಗ್ರ ಮಾಹಿತಿ ನನಗಿದೆ.
ಆದ್ದರಿಂದ ಇಂದು ಸಂಜೆ ೪ ಗಂಟೆಗೆ ಶಿಕ್ಷಕರ ಸಭೆ ಕರೆದಿರುವೆ. ಆ ಸಭೆಯಲ್ಲಿ ಶಿಕ್ಷಕರು ಏನು ನಿರ್ದೇಶನ ನೀಡುವರು ಅದರಂತೆ ಮುಂದಡಿ ಇಡುವೆ. ವರಿಷ್ಠರ ನಿರ್ಧಾರಕ್ಕೆ ಸಮ್ಮತಿಸಿ ಸುಮ್ಮನಿರುವಂತೆ ಹೇಳಿದರೆ ಸುಮ್ಮನಿರುವೆ. ಒಂದು ವೇಳೆ , ನಿಮಗೆ ಅನ್ಯಾಯವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಸೂಚಿಸಿದರೆ ಅದಕ್ಕೂ ಸಿದ್ಧವಿರುವೆ ಎಂದು ಕೆ.ಟಿ.ಶ್ರೀಕಂಠೇಗೌಡ ಸ್ಪಷ್ಟಪಡಿಸಿದರು.
key words : K.T. Srikantegowda , calls teachers' meeting, in the evening, warns of rebellion
summary:
K.T. Srikantegowda of the JD(S) said that he is the only real "teacher" among the ticket aspirants for the South Teachers' constituency.
Former Prime Minister and JD(S) national president H D Deve Gowda, gave the B form this morning to Vivekananda, the NDA alliance candidate from the South Teachers' constituency. State JD(S) core committee president and MLA G.T. Devegowda, Niranjan Murthy, Naganna Gowda and others were present.
I am qualified to represent the teachers' constituency. In fact, I am more qualified than the candidates of all parties. Because I am a teacher. I have been working as the president of the principals' association for the last 29 years along with 6 years of teaching experience. I have a thorough knowledge of the entire state of affairs in this field. K.T. Srikantegowda claimes.