For the best experience, open
https://m.justkannada.in
on your mobile browser.

ಕನ್ನಡ ನಾಡು - ನುಡಿಗೆ ಸಿಎಂ ಸಿದ್ದರಾಮಯ್ಯರಿಂದ ಧಕ್ಕೆ-ಬಿ.ವೈ ವಿಜಯೇಂದ್ರ.

11:27 AM Feb 22, 2024 IST | prashanth
ಕನ್ನಡ ನಾಡು   ನುಡಿಗೆ ಸಿಎಂ ಸಿದ್ದರಾಮಯ್ಯರಿಂದ ಧಕ್ಕೆ ಬಿ ವೈ ವಿಜಯೇಂದ್ರ

ಮೈಸೂರು,ಫೆಬ್ರವರಿ,22,2024(www.justkannada.in): ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನಾಡಗೀತೆ  ಕಡ್ಡಾಯ ಆದೇಶ ಹೊರಡಿಸಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,  ಸರಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು - ನುಡಿಗೆ ಸಿಎಂ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.

ಮೈಸೂರು ತಾಲ್ಲೂಕು ಹಂಚ್ಯಾ ಗ್ರಾಮದ ಲಕ್ಷ್ಮೀ ದೇವಮ್ಮ ದೇಗುಲ  ಉದ್ಘಾಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ದಂಪತಿ‌ ಭಾಗಿಯಾಗಿದ್ದರು. ಸಂಕಲ್ಪ‌ ಪೂಜೆ ನೆರವೇರಿಸಿ ದೇಗುಲ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ.  ಬರದ ಸ್ಥಿತಿ ಇಲ್ಲ ಎಂಬ ಭ್ರಮೆಯಲ್ಲಿ ಸಿಎಂ ಇದ್ದಾರೆ. ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ. ಆತಂಕದಲ್ಲೆ ದೆಹಲಿ ಚಲೋ ನಾಟಕ ಮಾಡಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡ್ತಿದೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಕೆಲಸವರನ್ನು ಕಾಂಗ್ರೆಸ್ ಗೆ ಸೆಳೆಯುವ ವಿಚಾರವೂ ನನಗೆ ಗೊತ್ತಿಲ್ಲ. ಊಹಾಪೋಹಕ್ಕೆ ಉತ್ತರ ಕೊಡಲ್ಲ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: Kannada CM Siddaramaiah –mysore-bjp-president-BY Vijayendra.

Tags :

.