For the best experience, open
https://m.justkannada.in
on your mobile browser.

ಕನ್ನಡ ಕಾನೂನು ಪುಸ್ತಕಗಳ ಲೋಕಾರ್ಪಣೆ  : ಪುಸ್ತಕದ 100 ಪ್ರತಿ ಖರೀದಿಸಿ ವಕೀಲರ ಸಂಘಕ್ಕೆ ಕೊಡುಗೆ ನೀಡಿದ ಲಾಗೈಡ್ ಬಳಗ.

08:34 PM Jun 12, 2024 IST | mahesh
ಕನ್ನಡ ಕಾನೂನು ಪುಸ್ತಕಗಳ ಲೋಕಾರ್ಪಣೆ    ಪುಸ್ತಕದ 100 ಪ್ರತಿ ಖರೀದಿಸಿ ವಕೀಲರ ಸಂಘಕ್ಕೆ ಕೊಡುಗೆ ನೀಡಿದ ಲಾಗೈಡ್ ಬಳಗ

Principal District and Sessions Court Judge Ravindra Hegde said that it is rare nowadays that law books are published in Kannada. Despite this, the books brought out by D V Guruprasad, and advocate B S Prashanth are useful for the general public, law students and lawyers.

ಮೈಸೂರು, ಜೂ.12,2024: (www.justkannada.in news)  ಜಿಲ್ಲಾ ವಕೀಲ ಸಂಘದ ಹಾಗೂ ಲಾಯರ್ಸ್ ಲಾ ಬುಕ್ಸ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಮೂರು ಕಾನೂನು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಮೈಸೂರು ಜಿಲ್ಲಾ ವಕೀಲರ ಸಂಘದ  ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು,  ಕಾನೂನು ಪುಸ್ತಕಗಳು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿರಳವಾಗಿದೆ. ಅದರ ಹೊರತಾಗಿಯೂ ಡಿ ವಿ ಗುರುಪ್ರಸಾದ್ ಹಾಗೂ ವಕೀಲ ಬಿ ಎಸ್ ಪ್ರಶಾಂತ್‌ರವರು ಹೊರತಂದಿರುವ ಪುಸ್ತಕಗಳು ಸಾಮಾನ್ಯ ಜನ, ಕಾನೂನು ವಿದ್ಯಾರ್ಥಿಗಳಿಗೆ ಮತ್ತು ವಕೀಲರುಗಳಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿ ವಿ ಗುರು ಪ್ರಸಾದ್ ಮಾತನಾಡಿ ಜನ ಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ಕನ್ನಡದಲ್ಲಿ ಹೆಚ್ಚು ಪುಸ್ತಕಗಳು ಹೊರ  ತರಬೇಕು ಎಂದು ತಿಳಿಸಿದರು. ಜೊತೆಗೆ ಈ ಪುಸ್ತಕಗಳು ವಕೀಲರು, ಪೊಲೀಸರು, ಸಾಮಾನ್ಯ ಜನಕ್ಕೆ ಉಪಯೋಗವಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕ ಎಚ್ ಎನ್ ವೆಂಕಟೇಶ್ ಮಾತನಾಡಿ,  ಮೈಸೂರು ಜಿಲ್ಲಾ ವಕೀಲರ ಸಂಘಕ್ಕೆ ಲಾಯರ್ಸ್ ಲಾ ಬುಕ್ ತಂದಿರುವ ಈ ಮೂರು ಪುಸ್ತಕಗಳ ತಲಾ 100 ಪ್ರತಿಯನ್ಮು ತಮ್ಮ ವೆಚ್ಚದಲ್ಲಿ ಖರೀದಿಸಿ ನೀಡುವುದಾಗಿ ತಿಳಿಸಿದರು. ಲಾ ಗೈಡ್ ಬಳಗದಿಂದ ಇದನ್ನು ಮಾಡುತ್ತಿದ್ದು. ಈ ಪುಸ್ತಕಗಳು ಕಿರಿಯ ವಕೀಲರಿಗೆ ಸಹಕಾರಿಯಾಗಲಿ ಎಂಬುದು ನನ್ನ ಉದ್ದೇಶವಾಗಿದೆ ಎಂದರು.

ಈ ಪುಸ್ತಕಗಳನ್ನು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಮೂಲಕ ಕಿರಿಯ ವಕೀಲರಿಗೆ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್. ಕಾರ್ಯದರ್ಶಿ ಸುಧೀರ್ ಜಂಟಿ ಕಾರ್ಯದರ್ಶಿ ಭರತ್, ಮಹಿಳಾ ಕಾರ್ಯದರ್ಶಿ ವಿನೋದ ಮತ್ತು ಉಪಾಧ್ಯಕ್ಷ ಚಂದ್ರಶೇಖರ್ ಹಾಗೂ ಚರಣ್ ರಾಜ್ ಸೇರಿ ಹಿರಿಯ ಕಿರಿಯ ವಕೀಲರು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

key words:  Kannada law books released, Law guide  Balaga, purchased 100 copies, of the book , contributed to ,the Bar Association.

summary: 

Principal District and Sessions Court Judge Ravindra Hegde, who presided over the programme held at Mysuru district bar association premises, released the books.

Speaking on the occasion, he said that it is rare nowadays that law books are published in Kannada. Despite this, the books brought out by D V Guruprasad, and advocate B S Prashanth are useful for the general public, law students and lawyers.

Tags :

.