For the best experience, open
https://m.justkannada.in
on your mobile browser.

ಹಿರಿಯ ಕನ್ನಡ ಚಳುವಳಿ ಹೋರಾಟಗಾರ ತಾಯೂರು ವಿಠ್ಠಲಮೂರ್ತಿ ನಿಧನ

11:07 AM Jul 09, 2024 IST | prashanth
ಹಿರಿಯ ಕನ್ನಡ ಚಳುವಳಿ ಹೋರಾಟಗಾರ ತಾಯೂರು ವಿಠ್ಠಲಮೂರ್ತಿ ನಿಧನ

ಮೈಸೂರು,ಜುಲೈ,9,2024 (www.justkanna.in): ಹಿರಿಯ ಕನ್ನಡ ಚಳುವಳಿ ಹೋರಾಟಗಾರ ತಾಯೂರು ವಿಠ್ಠಲಮೂರ್ತಿ  ಅವರು ಇಂದು ಮುಂಜಾನೆ ನಿಧನರಾದರು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವಿಟ್ಠಲ ಮೂರ್ತಿ ಇಂದು ಮುಂಜಾನೆ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ವಿಟ್ಠಲ ಮೂರ್ತಿ ಅವರು ಕನ್ನಡ ಚಳುವಳಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಕ್ರಿಯ ರಾಗಿದ್ದರು.

ನಗರದ ಕೃಷ್ಣ ರಾಜೇಂದ್ರ ಕೊ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ರಾಗಿದ್ರು. ಹಿರಿಯ ಕನ್ನಡ ಹೋರಾಟಗಾರ ವಾಟಳ್ ನಾಗರಾಜ ರವರ ನಿಕಟ ವರ್ತಿಯಾಗಿದ್ದರು. ಆಗ್ರಹಾರದ ನಿವಾಸದಲ್ಲಿ ಮಧ್ಯಾಹ್ನದವರೆಗೆ ವಿಟ್ಠಲ ಮೂರ್ತಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಂತರ ಹುಟ್ಟೂರು ತಾಯೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Key words: Kannada movement, activist, Tayuru Vitthalamurthy, passes away

Tags :

.