HomeBreaking NewsLatest NewsPoliticsSportsCrimeCinema

ಡಿಸಿಎಂ ವಿರುದ್ದದ ಕೇಸ್ ವಾಪಸ್ ಪಡೆಯುತ್ತೀರಿ: ಕನ್ನಡ ಹೋರಾಟಗಾರರ ಕೇಸ್ ಯಾಕೆ ವಾಪಸ್ ಪಡೆಯಲ್ಲ- ಮುಖ್ಯಮಂತ್ರಿ ಚಂದ್ರು ಕಿಡಿ.

01:46 PM Dec 29, 2023 IST | prashanth

ಬೆಂಗಳೂರು,ಡಿಸೆಂಬರ್,29,2023(www.justkannada.in): ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಬಂಧಿಸಿ, ಎಫ್ ಐ ಆರ್ ದಾಖಲು ಮಾಡಿರುವುದನ್ನು ರಾಜ್ಯ ಆಮ್ ಆದ್ಮಿ ಪಕ್ಷದ(AAP) ಮುಖ್ಯಸ್ಥ ಮುಖ್ಯಮಂತ್ರಿ ಚಂದ್ರು  ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಚಂದ್ರು, ರಾಜ್ಯ ವಿಂಗಡಣೆ ಆಗಿರುವುದು ಭಾಷೆ ಮೇಲೆ. ಭಾಷೆ ಬಗ್ಗೆ ದನಿ ಎತ್ತಿದರೇ ದೇಶದ್ರೋಹವಾಗಲ್ಲ.  ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನ ಬಂಧಿಸಿದ್ದು ಸರಿಯಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದದ ಕೇಸ್  ವಾಪಸ್ ಪಡೆಯುತ್ತೀರಿ. ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯೋಕೆ ಆಗಲ್ಲವಾ..? ಎಂದು ಕಿಡಿಕಾರಿದರು.

ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಅಧಿಕಾರಿಗಳನ್ನ ಜೈಲಿಗೆ ಕಳುಹಿಸಬೇಕು.  ಕ್ಷಮೆ ಕೇಳಿ ಕನ್ನಡ ಕಾರ್ಯಕರ್ತರನ್ನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಸರ್ಕಾರ ಮಾಲ್ ಗಳ ಪರ ನಿಂತು ದ್ರೋಹ ಮಾಡುತ್ತಿದೆ . ಕಮಿಷನ್ ಗಾಗಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.

Key words: kannada organization-arrest- Condemnation-mukyamantri chandru

 

Tags :
arrestCondemnationKannada organizationmukyamantri chandru
Next Article