ಕನ್ನಡ ಕಾಣಿಸದ ಬೋರ್ಡ್ ಗಳ ಮೇಲೆ ಕರವೇ ದಾಳಿ: ಇಂಗ್ಲೀಷ್ ನಾಮಫಲಕಗಳು ಧ್ವಂಸ.
ಬೆಂಗಳೂರು,ಡಿಸೆಂಬರ್,27,2023(www.justkannada.in): ಅಂಗಡಿ, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಕನ್ನಡ ಕಾಣಿಸದ ಬೋರ್ಡ್ ಗಳ ಮೇಲೆ ದಾಳಿ ನಡೆಸಿ ಇಂಗ್ಲೀಷ್ ನಲ್ಲಿದ್ದ ನಾಮಫಲಕಗಳನ್ನ ಕರವೇ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ರಸ್ತೆಗಿಳಿದ ನೂರಾರು ಮಂದಿ ಕರವೇ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ದೊಡ್ಡ ದೊಡ್ಡ ಜಾಹೀರಾತು ಫಲಕ ಏರಿ ಇಂಗ್ಲೀಷ್ ನಾಮಫಲಕಗಳನ್ನು ಹರಿದು ಹಾಕಿದ್ದಾರೆ.
ಪ್ರತಿಭಟನೆ ವೇಳೇ ಹಲವು ಕಡೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ಹಲವೆಡೆ ಇಂಗ್ಲೀಷ್ ಬೋರ್ಡ್ ಗಳಿರುವ ನಾಮಫಲಕಗಳಿಗೆ ಮಸಿ ಬಳಿದು, ಕನ್ನಡ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಏರ್ ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್, ರಸ್ತೆ, ಯು.ಬಿ.ಸಿಟಿ ರಸ್ತೆ ಸೇರಿದಂತೆ ಹಲವು ಕಡೆ ಭಾರಿ ಪ್ರತಿಭಟನೆ ನಡೆದಿದೆ.
ದೇವನಹಳ್ಳೀ ಬಳಿಯ ಸಾದಹಳ್ಳಿಯಲ್ಲಿ ಬ್ಲೂಮ್ ಹೋಟೆಲ್ ನ ಇಂಗ್ಲೀಷ್ ನಾಮಫಲಕವನ್ನ ಧ್ವಂಸಗೊಳಿಸಿದರು. ಸೀಸನ್ ರೆಸ್ಟೋರೆಂಟ್ ಮೇಲೂ ದಾಳಿ ಮಾಡಿಇಂಗ್ಲೀಷ್ ನಾಮಫಲಕವನ್ನ ಕಿತ್ತು ಹಾಕಿ ಕನ್ನಡ ಬಳಸದವರಿಗೆ ಧಿಕ್ಕಾರ ಅಂತಾ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Key words: kannada-organization- protest-boards –English -nameplates – Kannada