For the best experience, open
https://m.justkannada.in
on your mobile browser.

ಈ ಬಾರಿ 68 ಸಾಧಕರು, 10 ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಸರ್ಕಾರದಿಂದ ಪ್ರಕಟ..

04:18 PM Oct 31, 2023 IST | prashanth
ಈ ಬಾರಿ 68 ಸಾಧಕರು  10 ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ  ಸರ್ಕಾರದಿಂದ ಪ್ರಕಟ

ಬೆಂಗಳೂರು,ಅಕ್ಟೋಬರ್,31,2023(www.justkannada.in): ನಾಳೆ  ಕನ್ನಡ ರಾಜ್ಯೋತ್ಸವ ಆಚರಣೆಗೆ ರಾಜ್ಯಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಇದೀಗ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನ ಸರ್ಕಾರ ಬಿಡುಗಡೆ ಮಾಡಿದೆ.

ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68  ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಘೋಷಣೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, 2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ  ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಇಸ್ರೋ ಮುಖ್ಯಸ್ಥ ಸೋಮನಾಥ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ  ನೀಡಲಾಗುತ್ತಿದೆ 100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ,  ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು ಎಂದು ಮಾಹಿತಿ ನೀಡಿದರು.

ಹಾಗೆಯೇ 13 ಮಹಿಳೆಯರು ಮತ್ತು 54 ಪುರುಷರು ಹಾಗೂ  ಮತ್ತು ಒಬ್ಬರು ಮಂಗಳಮುಖಿ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪಡೆದವರಿಗೆ ರೂ. 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ ಎಂದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದವರ  ಪಟ್ಟಿ ಹೀಗಿದೆ...

ಸಂಗೀತ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

ಡಾ.ನಯನ ಎಸ್.ಮೋರೆ

ನೀಲಾ ಎಂ ಕೊಡ್ಲಿ

ಶಬ್ಬೀರ್ ಅಹಮದ್

ಡಾ.ಎಸ್ ಬಾಳೇಶ ಭಜಂತ್ರಿ

 ಚಲನಚಿತ್ರ ಕ್ಷೇತ್ರದಲ್ಲಿ ಇವರಿಗೆಲ್ಲ ರಾಜ್ಯೊತ್ಸವ ಪ್ರಶಸ್ತಿ

ಡಿಂಗ್ರಿ ನಾಗರಾಜ್

ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

ಎ.ಜಿ. ಚಿದಂಬರ ರಾವ್ ಜಂಬೆ

ಪಿ. ಗಂಗಾಧರ ಸ್ವಾಮಿ

ಹೆಚ್.ಬಿ.ಸರೋಜಮ್ಮ

ತಯ್ಯಬಖಾನ್ ಎಂ.ಇನಾಮದಾರ

ಡಾ.ವಿಶ್ವನಾಥ್ ವಂಶಾಕೃತ ಮಠ

ಪಿ.ತಿಪ್ಪೇಸ್ವಾಮಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

ಟಿ.ಶಿವಶಂಕರ್

ಕಾಳಪ್ಪ ವಿಶ್ವಕರ್ಮ

ಮಾರ್ಥಾ ಜಾಕಿಮೋವಿಚ್

ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ

ಅರ್ಗೋಡು ಮೋಹನದಾಸ ಶೆಣೈ

ಕೆ. ಲೀಲಾವತಿ ಬೈಪಾಡಿತ್ತಾಯ

ಕೇಶಪ್ಪ ಶಿಳ್ಳಿಕ್ಯಾತರ

ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

ಹುಸೇನಾಬಿ ಬುಡೆನ್ ಸಾಬ್ ಸಿದ್ದಿ

ಶಿವಂಗಿ ಶಣ್ಮರಿ

ಮಹದೇವು

ನರಸಪ್ಪಾ

ಶಕುಂತಲಾ ದೇವಲಾನಾಯಕ

ಎಚ್‌.ಕೆ ಕಾರಮಂಚಪ್ಪ

ಶಂಭು ಬಳಿಗಾರ

ವಿಭೂತಿ ಗುಂಡಪ್ಪ

ಚೌಡಮ್ಮ

ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

 ಹುಚ್ಚಮ್ಮ ಬಸಪ್ಪ ಚೌದ್ರಿ

ಚಾರ್ಮಾಡಿ ಹಸನಬ್ಬ

ಕೆ.ರೂಪ್ಲಾ ನಾಯಕ್

ನಿಜಗುಣಾನಂದ ಸ್ವಾಮೀಜಿ.

ನಾಗರಾಜು.ಜಿ

 ಆಡಳಿತ ಕ್ಷೇತ್ರ

ಬಲರಾಮ್, ತುಮಕೂರು

ವೈದ್ಯಕೀಯ ಕ್ಷೇತ್ರ

ಡಾ.ಸಿ. ರಾಮಚಂದ್ರ, ಬೆಂಗಳೂರು

ಡಾ.ಪ್ರಶಾಂತ್, ದ.ಕನ್ನಡ

 ಸಾಹಿತ್ಯ ಕ್ಷೇತ್ರ

ಪ್ರೊ. ಸಿ.ನಾಗಣ್ಣ, ಚಾಮರಾಜನಗರ

ಸುಬ್ಬು ಹೊಲೆಯಾರ್, ಹಾಸನ

ಸತೀಶ್ ಕುಲಕರ್ಣಿ, ಹಾವೇರಿ

ಲಕ್ಷ್ಮೀಪತಿ ಕೋಲಾರ

ಪರಪ್ಪ ಗುರುಪಾದಪ್ಪ ಸಿದ್ದಾಪುರ

ಡಾ. ಕೆ ಷರೀಫಾ

ಶಿಕ್ಷಣ ಕ್ಷೇತ್ರ

ರಾಮಪ್ಪ, ರಾಯಚೂರು

ಕೆ.ಚಂದ್ರಶೇಖರ್, ಕೋಲಾರ

ಕೆ.ಟಿ ಚಂದು, ಮಂಡ್ಯ

 ಕ್ರೀಡಾ ಕ್ಷೇತ್ರ

ಟಿ.ಎಸ್​. ದಿವ್ಯಾ

ಅದಿತಿ ಅಶೋಕ್

ಅಶೋಕ್ ಗದಿಗೆಪ್ಪ ಏಣಗಿ

ಪರಿಸರ ಕ್ಷೇತ್ರ

ಸೋಮನಾಥ ರೆಡ್ಡಿ ಪೂರ್ಮಾ

ದ್ಯಾವನಗೌಡ ಟಿ ಪಾಟೀಲ

ಶಿವರೆಡ್ಡಿ ಹನುಮರೆಡ್ಡಿ ವಾಸನ

ನ್ಯಾಯಾಂಗ ಕ್ಷೇತ್ರ

ಜ. ವಿ ಗೋಪಾಲ ಗೌಡ

 ಸಂಕೀರ್ಣ ಕ್ಷೇತ್ರ

ಎಂಎಂ ಮದರಿ

ಹಾಜಿ ಅಬ್ದುಲ್ಲಾ, ಪರ್ಕಳ

ಮಿಮಿಕ್ರಿ ದಯಾನಂದ್

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

 ಮಾಧ್ಯಮ ಕ್ಷೇತ್ರ

ದಿನೇಶ ಅಮೀನ್​​ಮಟ್ಟು

ಜವರಪ್ಪ

ಮಾಯಾ ಶರ್ಮ

ರಫೀ ಭಂಡಾರಿ

ವಿಜ್ಞಾನ ಮತ್ತು ತಂತ್ರಜ್ಞಾನ

ಎಸ್​​​. ಸೋಮನಾಥನ್​​​​ ಶ್ರೀಧರ್​​ ಪನಿಕರ್​​​

ಪ್ರೊ. ಗೋಪಾಲನ್ ಜಗದೀಶ್

ಹೊರನಾಡು ಮತ್ತು ಹೊರದೇಶ

ಸೀತಾರಾಮ ಅಯ್ಯಂಗಾರ್​​​​

ದೀಪಕ್​​​ ಶೆಟ್ಟಿ

ಶಶಿಕಿರಣ್​​​​ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿ ಗೌಡ

 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು

ಕರ್ನಾಟಕ ಸಂಘ, ಶಿವಮೊಗ್ಗ

ಬಿ.ಎನ್​.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು

ಮಿಥಿಕ್ ಸೊಸೈಟಿ, ಬೆಂಗಳೂರು

ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ

ಮೌಲಾನಾ ಆಜಾದ್ ಶಿಕ್ಷಣ & ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ

ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ

ಚಿಣ್ಣರಬಿಂಬ, ಮುಂಬೈ

ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ

ವಿದ್ಯಾದಾನ ಸಮಿತಿ, ಗದಗ

 

Key words: Kannada Rajyotsava- award - 68 achievers- 10 organizations

Tags :

.