For the best experience, open
https://m.justkannada.in
on your mobile browser.

‘64 ವಿದ್ಯೆ’ಗಳನ್ನು ಕನ್ನಡದಲ್ಲಿ ಹೇಳಿಕೊಡುವ AravathNalku64. ಯೂಟ್ಯೂಬ್ ಚಾನೆಲ್ !

02:52 PM Nov 10, 2023 IST | thinkbigh
‘64 ವಿದ್ಯೆ’ಗಳನ್ನು ಕನ್ನಡದಲ್ಲಿ ಹೇಳಿಕೊಡುವ aravathnalku64  ಯೂಟ್ಯೂಬ್ ಚಾನೆಲ್

ಬೆಂಗಳೂರು, ನವೆಂಬರ್ 10, 2023 (www.justkannada.in): ತಂತ್ರಜ್ಞಾನ ಬೆಳೆದಂತೆ ಅದರೊಟ್ಟಿಗೆ ಉದ್ಭವಿಸಿರುವ ಸೈಬರ್ ಸೆಕ್ಯೂರಿಟಿ ಸಮಸ್ಯೆ! ಈ ಕುರಿತು ಜನ ಸಾಮಾನ್ಯರು ವಹಿಸಬೇಕಾದ ಎಚ್ಚರಿಕೆಗಳು ಏನೆಂಬ ಪ್ರಶ್ನೆಗೆ ಉತ್ತರ… ಖರ್ಚು-ಉಳಿತಾಯ-ಹೂಡಿಕೆ ಕುರಿತ ಪ್ರಶ್ನೆಗಳಿಗೆ ಉತ್ತರ… ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್, ಹಣದ ನಿರ್ವಹಣೆ ಹೇಗೆ ಎಂಬ ಗೊಂದಲಗಳಿಗೂ ಪರಿಹಾರ… ಇದರ ಜತೆಗೆ ಸಾಹಿತ್ಯ-ಸಂಗೀತ-ಸಿನಿಮಾ… ಹಾಗೆಯೇ ಅನೇಕ ಸ್ಪರ್ಧೆಗಳು, ಗೆದ್ದವರಿಗೆ ವಿಶೇಷ ಬಹುಮಾನ…

- ಹೀಗೆ ಹತ್ತಾರೂ ಮಾಹಿತಿ ಹೊತ್ತು ತಂದು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿ ಮಾತೃಭಾಷೆ ಕನ್ನಡದಲ್ಲಿ ಒದಗಿಸುವ ಕನ್ನಡದ ಯೂಟ್ಯೂಬ್ ಚಾನೆಲ್ AravathNalku64.

ಹೌದು. ಅಂತರ್ಜಾಲ ಒಂದು ಮಾಯಾಲೋಕ! ಇಂದಿನ ಪೀಳಿಗೆ ಏನನ್ನು ನೆನಪಿಡಬೇಕಾದ ಪ್ರಮೇಯವೇ ಇಲ್ಲ. ಎಲ್ಲದಕ್ಕೂ ಗೂಗಲ್ ಇದೆ, ಬೆರಳ ತುದಿಯಲ್ಲೇ ಪರಿಹಾರವೂ ಇದೆ! ಆದರೆ ಇಲ್ಲಿ ಸಿಗುವ ಮಾಹಿತಿ ಬಹುತೇಕ ಆಂಗ್ಲಮಯ! ಮಾತೃಭಾಷೆ ಯಾವುದೇ ವಿಷಯದ ಗ್ರಹಿಕೆಗೆ ಉತ್ತಮ ಮಾಧ್ಯಮ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಇದನ್ನೇ ಗಮನದಲ್ಲಿಟ್ಟುಕೊಂಡು ಆರಂಭಿಸಿ ನಡೆಸುತ್ತಿರುವ ಯೂ ಟ್ಯೂಬ್ ಚಾನೆಲ್ AravathNalku64

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಚಾನೆಲ್ ಸಬ್’ಸ್ಕ್ರೈಬ್ ಮಾಡಿ

ಕನ್ನಡಿಗರಿಗೆ ಕನ್ನಡದಲ್ಲಿಯೇ ಹೆಚ್ಚು ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂಬುದು ಈ ಚಾನೆಲ್ ಸಂಸ್ಥಾಪಕರಾದ ಚಂದನ್ ಮತ್ತು ಪೂರ್ಣಿಮಾ ಅವರ ಅಭಿಲಾಷೆ. ಪುಸ್ತಕ ವಿಮರ್ಶೆ, ವಿಚಾರ ವಿನಿಮಯ, ಹಣಕಾಸು ನಿರ್ವಹಣೆ, ಸೈಬರ್ ಭದ್ರತೆ ಕುರಿತು ವಹಿಸಬೇಕಾದ ಮುನ್ನೆಚ್ಚರಿಗೆ, ಯೋಗ-ಧ್ಯಾನ, ಸಾಮಾನ್ಯ ಜ್ಞಾನ, ಷೇರು ಮಾರುಕಟ್ಟೆ ಹೀಗೆ ಹಲವಾರು ವಿಷಯಗಳ ಮಾಹಿತಿ ಭಂಡಾರವನ್ನು ಹಂಚಿಕೊಳ್ಳಲಾಗುತ್ತಿದೆ.

ಚಂದನ್ ಮತ್ತು ಪೂರ್ಣಿಮಾ ಪುಸ್ತಕ ಪ್ರೇಮಿಗಳು. ಇವರಂತೆಯೇ ನೀವು ಕೂಡ ಸಾಹಿತ್ಯಾಭಿರುಚಿ ಹೊಂದಿದ್ದರೆ AravathNalku64 ನಿಮಗೆ ಒಂದು ‘ಜಾಕ್ಪಾಟ್’! ಇಲ್ಲಿ ಹಲವಾರು ಪುಸ್ತಕಗಳು ಹಾಗೂ ಲೇಖಕರ ಪರಿಚಯದ ವಿಡಿಯೋಗಳನ್ನುನೋಡಬಹುದು.  ಇದಲ್ಲದೆ, ವಿಶೇಷ ಸಂದರ್ಭಗಳಲ್ಲಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಬಹುಮಾನಗಳೂ ಉಂಟು. ಈ ಮೂಲಕ AravathNalku64 ಚಾನೆಲ್ ನಲ್ಲಿ ನಿಮ್ಮ ಅದೃಷ್ಟ ಪರೀಕ್ಷೆಯನ್ನೂ ಮಾಡಿಕೊಳ್ಳಬಹುದು!

ಈಗಾಗಲೇ ಸುಮಾರು ೭೫ ವಿಡಿಯೋಗಳನ್ನು ಈ ಚಾನೆಲ್ ಹೊಂದಿದೆ. ಇನ್ನು ಹೆಚ್ಚಿನ ವಿಷಯಗಳ ಬಗ್ಗೆ ಮುಂಬರುವ ದಿನಗಳಲ್ಲಿ ವಿಡಿಯೋಗಳನ್ನು ಮಾಡುವ ಸದುದ್ದೇಶ ಕೂಡ AravathNalku64 ಸಂಸ್ಥಾಪಕರಾದ ಚಂದನ್ ಹಾಗೂ ಪೂರ್ಣಿಮಾ ಅವರಿಗಿದೆ. ಕನ್ನಡಿಗರಿಗೆ ಕನ್ನಡದಲ್ಲೇ ಮಾಹಿತಿ ದೊರೆಯುವಂತೆ ಮಾಡುವ ಗುರಿಯಿಂದ ಆರಂಭಿಸಿರುವ ಈ ಚಾಲನೆ ಎಲ್ಲರ ತುಂಬು ಮನಸ್ಸಿನ ಬೆಂಬಲ ಅಗತ್ಯ.. AravathNalku64 ಚಾನೆಲ್ ಗೆ ಸಬ್ಸ್ಕ್ರೈಬ್ ಆಗುವ ಮೂಲಕ ಕನ್ನಡದ ಮನಸ್ಸುಗಳು ಕನ್ನಡಕ್ಕಾಗಿ ಕೈಜೋಡಿಸಬೇಕು. AravathNalku64 ಚಾಲನೆ ಮಾಹಿತಿಯನ್ನು ಇತರೊಂದಿಗೆ ಹಂಚಿಕೊಳ್ಳಬೇಕು. https://www.youtube.com/@AravathNalku64

Tags :

.