For the best experience, open
https://m.justkannada.in
on your mobile browser.

7 ಭಾಷೆಗಳಲ್ಲಿ ‘ಕಾಂತಾರ-1’ ಫಸ್ಟ್ ಲುಕ್, ಟೀಸರ್  ರಿಲೀಸ್..

01:37 PM Nov 27, 2023 IST | prashanth
7 ಭಾಷೆಗಳಲ್ಲಿ ‘ಕಾಂತಾರ 1’ ಫಸ್ಟ್ ಲುಕ್  ಟೀಸರ್  ರಿಲೀಸ್

ಉಡುಪಿ,ನವೆಂಬರ್,27,2023(www.justkannada.in): ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಹಿಟ್ ಆದ ಬಳಿಕ ಇದೀಗ ಕಾಂತಾರ-1 ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಇಂದು ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನೆರವೇರಿತು.

ಕಾಂತಾರ-1 ಸಿನಿಮಾಗೆ ಮುಹೂರ್ತ ಬೆನ್ನಲ್ಲೆ 7 ಭಾಷೆಗಳಲ್ಲಿ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. 7 ಭಾಷೆಯಲ್ಲೂ ಪೋಸ್ಟರ್‌ ರಿಲೀಸ್‌ ಮಾಡಲಾಗಿದ್ದು,  ಅಜನೀಶ್‌ ಅವರ ಮ್ಯೂಸಿಕ್‌ ಟೀಸರ್‌ ನಲ್ಲಿ ವೀಕ್ಷಕರನ್ನು ರೋಮಾಂಚನಗೊಳಿಸಿದೆ.

ಚಿತ್ರ ಮುಹೂರ್ತ ಬಳಿಕ ಮಾತನಾಡಿರುವ  ನಟ ರಿಷಬ್ ಶೆಟ್ಟಿ, ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ.  ತಾಂತ್ರಿಕವಾಗಿ ಯಾವುದೇ ಬದಲಾವಣೆ ಇಲ್ಲ.  ಕೆಲ ಹೊಸ ಕಲಾವಿದರು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂತಾರ’ ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಯಿತು. ಆ ಬಳಿಕ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಬಿಡುಗಡೆ ಕಂಡಿತು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದ್ದು. ಈಗ ‘ಕಾಂತಾರ -1’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರುತ್ತಿದೆ.

Key words: Kantara-1- first look -release - 7 languages..

Tags :

.