ಕರ್ನಾಟಕ: ರಾಜ್ಯಸಭಾ ಚುನಾವಣೆಗೆ ‘ಕೈ’ ಅಭ್ಯರ್ಥಿಗಳ ಪಟ್ಟಿ ಪ್ರಕಟ.
04:58 PM Feb 14, 2024 IST
|
prashanth
ಬೆಂಗಳೂರು,ಫೆಬ್ರವರಿ,14,2024(www.justkannada.in): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಮೂವರಿಗೆ ಟಿಕೆಟ್ ನೀಡಿದ್ದು, ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಒಟ್ಟು ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ. ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಜಿ.ಸಿ.ಚಂದ್ರಶೇಖರ್, ನಾಸೀರ್ ಹುಸೇನ್ ಮತ್ತು ಅಜಯ್ ಮಕೇನ್ ಅವರಿಗೆ ಟಿಕೆಟ್ ನೀಡಿದೆ.
ಈ ಮೂಲಕ ಜಿ.ಸಿ.ಚಂದ್ರಶೇಖರ್ ಮತ್ತು ನಾಸೀರ್ ಹುಸೇನ್ ಅವರಿಗೆ ಕಾಂಗ್ರೆಸ್ ಮತ್ತೊಮ್ಮೆ ಟಿಕೆಟ್ ನೀಡಿದ್ದು, ಇನ್ನು ಎಐಸಿಸಿ ಖಜಾಂಚಿಯಾಗಿರುವ ದೆಹಲಿ ಮೂಲದ ಅಜಯ್ ಮಕೇನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಇನ್ನು ತೆಲಂಗಾಣದಲ್ಲಿ ರೇಣುಕಾ ಚೌಧರಿ, ಅನಿಲ್‌ಕುಮಾರ್ ಯಾದವ್‌ಗೆ ಟಿಕೆಟ್ ಸಿಕ್ಕರೆ, ಮಧ್ಯಪ್ರದೇಶದಲ್ಲಿ ಅಶೋಕ್ ಸಿಂಗ್ ಗೆ ಟಿಕೆಟ್ ಘೋಷಿಸಲಾಗಿದೆ.
Key words: Karnataka-congress-candidates -Rajya Sabha -elections
Next Article