For the best experience, open
https://m.justkannada.in
on your mobile browser.

ಉತ್ತರಾಖಂಡ್ ಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರು ಸಾವು.

06:21 PM Jun 05, 2024 IST | prashanth
ಉತ್ತರಾಖಂಡ್ ಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರು ಸಾವು

ಬೆಂಗಳೂರು, ಜೂನ್​,5,2024 (www.justkannnada.in):  ಉತ್ತರಾಖಂಡ್ ​ನ ಸಹಸ್ರತಾಲ್​​ ಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ  ನಾಲ್ವರು ಚಾರಣಿಗರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ನಾಲ್ವರು ಗೈಡ್​ಗಳು ಸೇರಿ 19 ಚಾರಣಿಗರು ಚಾರಣಕ್ಕೆ ತೆರಳಿದ್ದಾಗ ದುರಂತ ಸಂಭವಿಸಿದೆ. ಆದರೆ ದುರಂತದಲ್ಲಿ ಮೃತಪಟ್ಟವರ ಗುರುತು ಇನ್ನು ತಿಳಿದುಬಂದಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಂಗಳೂರಿನಿಂದ ಡೆಹ್ರಾಡೂನ್​ಗೆ ತೆರಳಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಾಜ್ಯಸರ್ಕಾರ ಧಾವಿಸಿದ್ದು,  ಸಚಿವ ಕೃಷ್ಣಭೈರೇಗೌಡ ಉತ್ತರಾಖಂಡ್‌ ಗೆ ತೆರಳಿ ಪರಿಹಾರ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್​​ ಸರ್ಕಾರದ ಜೊತೆ ಮಾತಾಡಿರುವ ಬಗ್ಗೆಯೂ ಮಾಹಿತಿ ನೀಡಿದ್ದು, ಖುದ್ದು ತೆರಳಿ ಕಾರ್ಯಾಚರಣೆ ನೋಡಿಕೊಳ್ಳಲು ಸಿಎಂ ಸೂಚನೆ ಮೇರೆಗೆ ಡೆಹ್ರಾಡೂನ್​ಗೆ ತೆರಳಿದ್ದಾರೆ.

Key words: Karnataka, Four people, death, Uttarakhand

Tags :

.