ಪುಸ್ತಕ ಖರೀದಿಯೇ ನಡೆದಿಲ್ಲ, ಇನ್ನು ಭ್ರಷ್ಟಾಚಾರ ಎಲ್ಲಿಂದ ಬಂತು.?: ಕರ್ನಾಟಕ ಕಾನೂನು ವಿವಿ ಕುಲಪತಿ.
ಮೈಸೂರು, ಮೇ.28, 2024: (www.justkannada.in news): ಪುಸ್ತಕ ಖರೀದಿ ಪ್ರಕರಣದಲ್ಲಿ ಯಾವುದೇ ಕಾನೂನು ಉಲ್ಲಂಘನೆ ನಡೆಸಿಲ್ಲ. ಈ ಬಗ್ಗೆ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಸವರಾಜು ಸ್ಪಷ್ಟನೆ ನೀಡಿದರು.
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದ ಪ್ರಕರಣದ ಬಗ್ಗೆ ʼ ಜಸ್ಟ್ ಕನ್ನಡʼ ಸುದ್ದಿ ಮಾಡಿತ್ತು. ಈ ಸುದ್ಧಿಗೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಪ್ರೊ.ಬಸವರಾಜು ಅವರು ಹೇಳಿದಿಷ್ಟು..
ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ KPTT ಕಾಯ್ದೆ ನಿಯಮ ಪಾಲನೆಯಾಗಿಲ್ಲ ಮತ್ತು ದರಪಟ್ಟಿ ಸಹ ಪಡೆದಿಲ್ಲ ಎಂದಿರುವ ಕುಲಸಚಿವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಏಕೆಂದರೆ, ಕುಲಸಚಿವರು ಆರೋಪಿಸಿರುವಂತೆ ವಿಶ್ವವಿದ್ಯಾಲಯದಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಮೊತ್ತವನ್ನು ಪಾವತಿಸಿಲ್ಲ. ಏಕೆಂದರೆ ಪುಸ್ತಕವನ್ನೇ ಖರೀದಿಸಿಲ್ಲ. ಜತೆಗೆ ಮುಂದುವರಿದು ಹೇಳಬೇಕೆಂದರೆ, ಪುಸ್ತಕ ಖರೀದಿಯಂಥ ಯಾವುದೇ ಪ್ರಕ್ರಿಯೆ ಸಹ ವಿವಿಯಲ್ಲಿ ನಡೆದಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಪುಸ್ತಕ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಪತ್ರದಲ್ಲಿ ಕುಲಸಚಿವರು ಆರೋಪಿಸಿದ್ದಾರಲ್ಲ. ಅವರಿಗೆ ಪುಸ್ತಕ ಖರೀದಿಯೇ ನಡೆದಿಲ್ಲ ಎಂಬುದು ತಿಳಿದಿರಲಿಲ್ಲವೇ ಎಂದು ʼಜಸ್ಟ್ ಕನ್ನಡ ʼ ಪ್ರಶ್ನಿಸಿದಾಗ, ಇದನ್ನು ನೀವು ಕುಲಸಚಿವರಿಂದಲೇ ಮಾಹಿತಿ ಪಡೆಯಬೇಕು ಎಂದು ಪ್ರೊ.ಬಸವರಾಜು ಉತ್ತರಿಸಿದರು.
ಕೆಪಿಟಿಟಿ ಆಕ್ಟ್ ಅನ್ವಯ , ಯಾವುದೇ ಮುದ್ರಿತ ಪುಸ್ತಕ ಖರೀದಿಗೆ ಈ ಕಾಯ್ದೆ ಅನ್ವಯವಾಗದು. ಸ್ಪಷ್ಟವಾಗಿಯೇ excluding reading material ಎಂದು ಉಲ್ಲೇಖಿಸಲಾಗಿದೆ. ಪುಸ್ತಕ ಖರೀದಿಗೆ ಎಲ್ಲಾದರೂ ಟೆಂಡರ್ ಕರೆಯುತ್ತಾರಾ..? ಎಂದು ಮರು ಪ್ರಶ್ನಿಸಿದ ಕುಲಪತಿ ಪ್ರೊ.ಬಸವರಾಜು, ಮುಖ್ಯವಾಗಿ ಕಾನೂನು ವಿವಿಯಲ್ಲಿ ಯಾವುದೇ ಪುಸ್ತಕ ಖರೀದಿ ಪ್ರಕ್ರಿಯೆ ನಡೆದಿಲ್ಲ ಎಂದ ಮೇಲೆ ಉಳಿದೆಲ್ಲಾ ಆರೋಪಗಳು ನಿರಾಧಾರ ಎಂದು ನುಡಿದರು.
key words: There was no purchase of books, where did the corruption come from? Karnataka law university ,vc
summary:
ಕಾನೂನು ವಿವಿಯಲ್ಲೇ ಇದೇನ್ ‘LAW ‘; ಸರಕಾರಕ್ಕೆ ಪತ್ರ ಬರೆದ ರಿಜಿಸ್ಟ್ರಾರ್.!
There was no violation of law in the book purchase case. State Law University Vice-Chancellor Prof. Basavaraju clarified that the allegations are far from the truth.
Just Kannada had reported about a case in which registrar Anuradha Vastrad had written a letter to the government alleging corruption in the purchase of books for the library of the state law university. Reacting to the news, Vice-Chancellor Prof. Basavaraju said.
As per the KPTT Act, the Act does not apply to the purchase of any printed book. Clearly referred to as excluding reading material. Will you call for tenders for the purchase of books? Vice-Chancellor Prof. Basavaraju asked.