ಸಂಜೆ 5 ಗಂಟೆ ವೇಳೆಗೆ ಶೇ 63.90ರಷ್ಟು ಮತದಾನ: ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ವೋಟಿಂಗ್: 14 ಕ್ಷೇತ್ರಗಳ ವಿವರ ಹೀಗಿದೆ.
ಬೆಂಗಳೂರು,ಏಪ್ರಿಲ್,26,2024 (www.justkannada.in): ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಸಂಜೆಯಾಗುತ್ತಲೇ ಮತದಾನ ಬಿರುಸುಗೊಂಡಿದೆ. ಈ ನಡುವೆ ಸಂಜೆ 5 ಗಂಟೆವರೆಗೆ ಶೇಕಡಾ 63.90ರಷ್ಟು ಮತದಾನವಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಶೇ 74.87ರಷ್ಟು ವೋಟಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 5 ಗಂಟೆವರೆಗೆ ಶೇ 63.90ರಷ್ಟು ಮತದಾನ
ಬೆಂಗಳೂರು ಸೆಂಟ್ರಲ್ –ಶೇ 48.61ರಷ್ಟು ಮತದಾನ
ಬೆಂಗಳೂರು ಉತ್ತರ - ಶೇ 50.04ರಷ್ಟು ಮತದಾನ
ಬೆಂಗಳೂರು ಗ್ರಾಮಾಂತರ - ಶೇ 61.78ರಷ್ಟು ಮತದಾನ
ಬೆಂಗಳೂರು ದಕ್ಷಿಣ – ಶೇ 49.37ರಷ್ಟು ಮತದಾನ
ಚಾಮರಾಜನಗರ –ಶೇ 69.60ರಷ್ಟು ಮತದಾನ
ಚಿಕ್ಕಬಳ್ಳಾಪುರ - ಶೇ 70.97ರಷ್ಟು ಮತದಾನ
ಚಿತ್ರದುರ್ಗ - ಶೇ 67ರಷ್ಟು ಮತದಾನ
ದಕ್ಷಿಣ ಕನ್ನಡ – ಶೇ 71.83ರಷ್ಟು ಮತದಾನ
ಹಾಸನ – ಶೇ 72.13ರಷ್ಟು ಮತದಾನ
ಕೋಲಾರ –ಶೇ 71.26ರಷ್ಟು ಮತದಾನ
ಮಂಡ್ಯ – ಶೇ 74.87ರಷ್ಟು ಮತದಾನ
ಮೈಸೂರು-ಕೊಡಗು – ಶೇ 65.85ರಷ್ಟು ಮತದಾನ
ತುಮಕೂರು – ಶೇ 72.10ರಷ್ಟು ಮತದಾನ
ಉಡುಪಿ-ಚಿಕ್ಕಮಗಳೂರು – ಶೇ 72.13ರಷ್ಟು ಮತದಾನ
Key words: Karnataka, Lokasabha, election, voting