ಕದನ ಕುತೂಹಲ ಮೂಡಿಸಿದ ಮೇ 7 ರ ʼ ಸೆಕೆಂಡ್ ಫೇಸ್ ʼ ಚುನಾವಣೆ..!
ಬೆಂಗಳೂರು, ಏ.29, 2024 : (www.justkannada.in news ) ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು, ಉಳಿದ 14 ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
ರಾಜ್ಯದ ಮೊದಲ ಹಂತ ಚುನಾವಣೆ ಏಪ್ರಿಲ್ 26 ರಂದು 14 ಸ್ಥಾನಗಳಿಗೆ ಮತದಾನ ನಡೆಯಿತು. ದಕ್ಷಿಣ ರಾಜ್ಯದಲ್ಲಿ 14 ಕ್ಷೇತ್ರಗಳನ್ನು ಹೊರತುಪಡಿಸಿ 69.56 ರಷ್ಟು ಮತದಾನವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ಮತಗಟ್ಟೆಯಲ್ಲಿ ಇಂದು ಮತದಾನ ನಡೆಯುತ್ತಿದೆ.
ಮೇ 7 ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಈ ಹಂತದಲ್ಲಿ ಎಲ್ಲರ ಕಣ್ಣು ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಧಾರವಾಡದಂತಹ ಹೈ-ಪ್ರೊಫೈಲ್ ಸೀಟುಗಳತ್ತ ನೆಟ್ಟಿದೆ.
ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗದಿಂದ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಹಾಗೂ ಅವರ ಎದುರಾಳಿಯಾಗಿ ನಟ ಶಿವರಾಜ್ ಕುಮಾರ್ ಮಡದಿ, ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಗೀತಾ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದಲೇ ಬಿಜೆಪಿ ಉಚ್ಛಾಟಿತ ನಾಯಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕುತೂಹಲ ಮೂಡಿಸಿದೆ.
ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 2004ರಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅನಂತಕುಮಾರ ಹೆಗಡೆ ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿ ಅವರ ಸ್ಥಾನಕ್ಕೆ ಕಾಗೇರಿಗೆ ಮಣೆ ಹಾಕಿದೆ.
key words : karnataka-loksabha, elections-2024, voting, remaining-14-seats, on-may-7, key-contests.
summary :
'second phase' election slated to be held on May 7
In this phase, all eyes will be on high-profile seats such as Haveri, Shimoga, Uttar Kannada, and Dharwad. The BJP has fielded former chief minister Basavaraj Bommai from Haveri, BS Yediyurappa's son BY Raghavendra from Shimoga, Union Minister Pralhad Joshi from Dharwad, and Vishweshwar Hegde Kageri from Uttar Kannada.