For the best experience, open
https://m.justkannada.in
on your mobile browser.

ಕರ್ನಾಟಕ ನ್ಯಾಯಾವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ -2023 ಅಂಗೀಕಾರ: ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ.

11:30 AM Dec 16, 2023 IST | prashanth
ಕರ್ನಾಟಕ ನ್ಯಾಯಾವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ  2023 ಅಂಗೀಕಾರ  ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

ಮೈಸೂರು,ಡಿಸೆಂಬರ್,16,2023(www.justkannada.in): ಕರ್ನಾಟಕ ರಾಜ್ಯದ ವೃತ್ತಿಪರ ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ "ಕರ್ನಾಟಕ ನ್ಯಾಯಾವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ -2023 ವಿಧಾನಮಂಡಲ  ಉಭಯಸದನಗಳಲ್ಲಿ ಅಂಗೀಕಾರಗೊಳ್ಳಲು ಕಾರಣಕರ್ತರಾದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ತಿಮ್ಮಯ್ಯ ತಿಳಿಸಿದರು.

ಇಂದು ಮೈಸೂರಿನಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ವತಿಯಿಂದ ಸುದ್ದಿಗೋಷ್ಠಿ ನಡೆಯಿತು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಿಮ್ಮಯ್ಯ ಅವರು, ಕರ್ನಾಟಕ ರಾಜ್ಯದ ವೃತ್ತಿಪರ ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ ಕರ್ತವ್ಯನಿರತ ವಕೀಲರಿಗೆ ರಕ್ಷಣೆ ನೀಡುವ ವಿಚಾರವಾಗಿ "ಕರ್ನಾಟಕ ನ್ಯಾಯಾವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿದೇಯಕ -2023" ವಿದೇಯಕವನ್ನು ರಾಜ್ಯ ಸರ್ಕಾರವು ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಿ ದಿನಾಂಕ:14.12.2023 ರಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಹಾಗೂ 5.12.2023 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕಾರಗೊಂಡಿದೆ. ಈ ವಿಧೇಯಕದ ಅಂಗೀಕಾರವು ರಾಜ್ಯದ ವಕೀಲ ಬಾಂಧವರಿಗೆ ಸಂತೋಷದ ವಿಚಾರವಾಗಿದೆ ಎಂದರು.

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕವು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವ ಕುರಿತು ಈಗಾಗಲೇ ಹಲವಾರು ಬಾರಿ ಸಿಎಂ ಸಿದ್ದರಾಮಯ್ಯನವರ ಬಳಿ ಮನವಿ ಸಲ್ಲಿಸಲಾಗಿತ್ತು. ಕಾನೂನು ಸಚಿವ ಹೆಚ್.ಕೆ ಪಾಟೀಲ್,  ಕೆ.ಪಿ.ಸಿ.ಸಿ. ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಎ.ಎಸ್. ಪೊನ್ನಣ್ಣರವರ ಬಳಿ ಮನವಿ ಮಾಡಿದ್ದವು.

ಇದೀಗ ವಿಧಾನಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲು ಕಾರಣಕರ್ತರಾದ  ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ರವರಿಗೆ ಕೆ.ಪಿ.ಸಿ.ಸಿ. ಕಾನೂನು ಘಟಕದ ರಾಜ್ಯಾಧ್ಯಕ್ಷ  ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣರವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು  ತಿಮ್ಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೆ.ಪಿ.ಸಿ.ಸಿ.ಕಾನೂನು ಘಟಕದ ಉಪಾಧ್ಯಕ್ಷ ಪಾಳ್ಯಸುರೇಶ್, ಕೆ.ಪಿ.ಸಿ.ಸಿ. ಕಾನೂನು ಘಟಕದ ಪ್ರಧಾನಕಾರ್ಯದರ್ಶಿ ಎ.ಆರ್.ಕಾಂತರಾಜು, ಕೆ.ಪಿ.ಸಿ.ಸಿ. ಕಾನೂನು ಘಟಕದ ರಾಜ್ಯ- ಕಾರ್ಯದರ್ಶಿ ಪುಟ್ಟರಸ, ಕೆ.ಪಿ.ಸಿ.ಸಿ. ಕಾನೂನು ಘಟಕದ ಕಾರ್ಯದರ್ಶಿ  ಗಂಗಾಧರ್.ಕೆ.. ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಮಂಜುನಾಥ್.ಟಿ., ಜಿಲ್ಲಾ ಉಪಾಧ್ಯಕ್ಷಬಸವರಾಜು, ಲಕ್ಕೇಗೌಡ ಉಪಸ್ಥಿತರಿದ್ದರು.

Key words: Karnataka- Prohibition of Violence –Against- Lawyers -Bill-2023 –passed-mysore

Tags :

.