For the best experience, open
https://m.justkannada.in
on your mobile browser.

ನಾಡಪ್ರಭು ಕೆಂಪೇಗೌಡರು  ಒರ್ವ ” ವಿಷನರಿ ಲೀಡರ್ “: ಡಾ.ನಿರ್ಮಲಾನಂದನಾಥ ಸ್ವಾಮೀಜಿ

08:07 PM Sep 10, 2024 IST | mahesh
ನಾಡಪ್ರಭು ಕೆಂಪೇಗೌಡರು  ಒರ್ವ ” ವಿಷನರಿ ಲೀಡರ್ “  ಡಾ ನಿರ್ಮಲಾನಂದನಾಥ ಸ್ವಾಮೀಜಿ

ಮೈಸೂರು, ಸೆ.10,2024: (www.justkannada.in news) ನಾಡ ಪ್ರಭು ಕೆಂಪೇಗೌಡರು  ಕೇವಲ ಸಾಮಂತರಾಜ ಮಾತ್ರವಲ್ಲದೇ ಬದುಕಿನ್ನುದ್ದಕ್ಕೂ ಮುಂದಿನ ಸಮಾಜಕ್ಕೆ ಏನು ನೀಡಬೇಕು ಎಂಬ ಗುರಿ ಹೊಂದಿದ್ದ” ವಿಷನರಿ ಲೀಡರ್ “ ಆಗಿದರು ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ಅವರ ಮಾತಿನಂತೆ ಕೆಂಪೇಗೌಡ ಚರಿತ್ರೆ ಓದಬೇಕು. ಇಂದಿನ ಇತಿಹಾಸ ತಿಳಿದರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸುಲಭ ಎಂದರು.

ಕೆಂಪೇಗೌಡರ ಬಗ್ಗೆ ತಿಳಿದುಕೊಳ್ಳದೆ, ಬೇರೆ ಬೇರೆ ವರದಿಗಳ ಆಧಾರದ ಮೇಲೆ ಊಹೆಗೂ ನಿಲುಕುವುದಿಲ್ಲ. ಒಬ್ಬ ವ್ಯಕ್ತಿಯ ಪೂರ್ವಪರ ತಿಳಿಯದಿದ್ದರೆ ಉಡಾಫೆ ಉತ್ತರ ನಿರೀಕ್ಷಿಸಬೇಕಾಗುತ್ತದೆ. ಕೆಂಪೇಗೌಡರು ಬದುಕಿದಾಗ ದೇಶಕ್ಕೆ ನಾಡಿಗೆ ಏನಾದರೂ  ಸೇವೆ  ಮಾಡಬೇಕು ಎಂಬ ತುಡಿತವಿತ್ತು. ಅದರಂತೆ ಸಾಕಷ್ಟು ಸೇವೆಯನ್ನು ಮಾಡಿದ್ದು, ಅವರು

ಪಂಚ ಋಣವಿದ್ದು, ಮಾತ, ಪಿತೃ, ದೇವ, ಋಷಿ ಮತ್ತು ಸೇವೆಯ ಋಣಗಳಿವೆ. ಋಣದ ಈ ಸೂತಕವನ್ನು ಬಗೆಹರಿಸಿಕೊಳ್ಳುವುದು ಕಷ್ಟಕರ. ಮಾತೃ-ಪಿತೃ  ಋಣಗಳನ್ನು ತೀರಲು ಎಷ್ಟು ಜನ್ಮವಿದ್ದರೂ ಸಾಲದೂ. ಹಾಗೇ  ಕೆಂಪೌಗೌಡರು ನಾಡಿಗೆ ಮಾಡಿರುವ ಸೇವೆಯ ಋಣವನ್ನು ತೀರಿಸಲು ಅವರ ಬಗ್ಗೆ ತಿಳಿದುಕೊಳ್ಳಬೇಕು. ನಾಡನ್ನು ಕಟ್ಟಿ ಬಿಟ್ಟಿರುವ ಅವರ ಆದರ್ಶನವನ್ನು ಮುಂದಿನ ಪೀಳಿಗೆಗೆ ತಿಳಿಸಲು ಮುಕ್ತ ವಿವಿಯೂ ನಾಡಪ್ರಭು ಕೆಂಪೇಗೌಡರ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಆರಂಭಿಸಿದೆ ಎಂದರು.

ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡ ಅಧ್ಯಯನ ಪೀಠದ ಅವಶ್ಯಕತೆ ಇದ್ದೀಯಾ ಎಂದು ಅನೇಕರು ಮಾತನಾಡುತ್ತಾರೆ. ಆದರೆ, ಇತಿಹಾಸದಲ್ಲಿ ಎರಡು ರಾಜಮನೆತನಗಳನ್ನು ಕಡೆಗಣನೆ ಮಾಡಲಾಗಿದ್ದು, ಗಂಗರು ೬೫೪ ವರ್ಷ ಹಳೆ ಮೈಸೂರು, ತಮಿಳು ನಾಡಿನ ಪಶ್ಚಿಮ ಭಾಗವನ್ನು ಸಮರ್ಥವಾಗಿ ಆಳುವ ಮೂಲಕ ಶ್ರೀರಾಜ್ಯ ಎಂಬ ಬಿರುದು ಪಡೆದುಕೊಂಡಿದೆ. ಹಾಗೇ ಚಾಳುಕ್ಯರು ಮತ್ತು ರಾಷ್ಟ್ರಕೂಟರ ಬೆನ್ನೆಲುಬಾಗಿ ನಿಂತಿತು. ಕರ್ನಾಟಕ ಮಾತ್ರವಲ್ಲದೇ ದೇಶದಲ್ಲಿಯೇ ಚಾಳುಕ್ಯರು ಮತ್ತು ರಾಷ್ಟ್ರಕೂಟರು ಇಲ್ಲದಿದ್ದರೆ ಇತಿಹಾಸ ಏನಾಗುತ್ತಿದ್ದು ಎಂದು ಬೇಸರ ವ್ಯಕ್ತಪಡಿಸಿದರು.

ಕೆಂಪೇಗೌಡರ ಬಗ್ಗೆ ಪೂರ್ಣ ಪ್ರಮಾಣದ ವಿವರ ಇಲ್ಲದವರು ಇಲ್ಲಸಲದ್ದನ್ನು ಮಾತನಾಡುತ್ತಿದ್ದಾರೆ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರಿಗೆ ಕೃಷ್ಣದೇವರಾಯ ಅಮರನಾಯಕ ಎಂಬ ಬಿರುದು ನೀಡಿದ್ದಾರೆ. ಈ ಬಗ್ಗೆ ಕಲ್ಯದ ಶಾಸನದಲ್ಲಿ ಉಲ್ಲೇಖವಿದೆ. ಕಲ್ಯ ಶಾಸನವನ್ನು ಅಧ್ಯಯನ ಮಾಡಿದರೆ ಇವುಗಳ ಬಗ್ಗೆ ದೊರೆಯುತ್ತದೆ ಎಂದು ತಿಳಿಸಿದರು.

ಅಚ್ಚುತರಾಯರು ನೀಡಿದ ಚಿನ್ನದ ನಾಣ್ಯಗಳನ್ನು ಬಳಸಿಕೊಂಡು  ವಿಜಯನಗರದ ಕಾಲಘಟ್ಟದಲ್ಲಿ ಬೆಂಗಳೂರಿನ ಕೋಟೆ ಮಾತ್ರ ನಿರ್ಮಾಣವಾಯಿತು. ಈ ಕೋಟೆಯಲ್ಲಿ ಮಾತ್ರ ಸಾಮಾನ್ಯ ಜನರಿಗೂ ಪ್ರವೇಶವಿತು. ಶೇ.೧೦ರಷ್ಟು ಸ್ಥಳದಲ್ಲಿ ಅವರು ಇದ್ದು, ಬಾಕಿ ಶೇ.೯೦ರಷ್ಟು ಸ್ಥಳದಲ್ಲಿ ೬೪ ಪೇಟೆಗಳನ್ನು ನಿರ್ಮಿಸಿ ನಾಡಿನ ಎಲ್ಲಾ ಜಾತಿ ಅವರಿಗೂ ಅವಕಾಶ ಕಲ್ಪಿಸಿಕೊಟ್ಟರು. ಹಾಗೇ ವಿವಿಧ ರಾಜ್ಯದ ಕರಕುಶಲದವರಿಗೂ ಅವಕಾಶ ಕಲ್ಪಿಸುವ ಮೂಲಕ  ಸರ್ವಜನಾಂಗ ಶಾಂತಿಯ ದೊರೆಯಾಗಿದರು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ಮುಕ್ತ ವಿವಿಯ ಮುಖ್ಯ ಧ್ಯೇಯವೇ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬುವುದು. ಈ ಘೋಷಣೆಯೊಂದಿಗೆ ೧೯೯೬ ರಲ್ಲಿ ಸ್ಥಾಪನೆಯಾಗಿ ಸಾವಿರಾರು ಸಂಶೋಧಕರಿಗೆ, ಲಕ್ಷಾಂತರ ಮಂದಿಗೆ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಪದವಿಯನ್ನು ನೀಡಿದೆ.

ಅನೇಕ ಸಂಶೋಧಕರಿಗೆ ಬರಹಗಾರರಿಗೆ ಸಾಹಿತ್ಯಗಾರರಿಗೆ ನಮ್ಮ ವಿಶ್ವವಿದ್ಯಾನಿಲಯವೇ ತವರು ಮನೆಯಾಗಿದೆ ಈ ದೃಷ್ಟಿಕೋನದಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಹಲವು ಪೀಠಗಳನ್ನು ಅಧ್ಯಯನ ಕೇಂದ್ರಗಳನ್ನು ತೆರೆಯಲಾಗಿದೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ.

ಈ ಕೇಂದ್ರದ ಮುಖ್ಯ ಉದ್ದೇಶ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳನ್ನು ಅಧ್ಯಯನ ಮಾಡುವುದು. ನಾಡಪ್ರಭು ಕೆಂಪೇಗೌಡರು ಸಾಮಂತರಾಜರಾದರೂ ಸಹ ವಿಶ್ವವನ್ನ ಬೆರಗುಗೊಳಿಸಿದ ನಾಡಪ್ರಭುವಾಗಿ ಬೆಳೆದದ್ದು ಹೇಗೆ ಎಂಬುವುದರ ಬಗ್ಗೆ ಹಲವು ಮಜುಲುಗಳಲ್ಲಿ ಸಂಶೋಧನೆ ಮಾಡುವುದು. ಜತೆಗೆ ಆಡಳಿತದ ನೀತಿ ಸಾಮಾಜಿಕ ಬದ್ಧತೆ ಕೃಷಿ ಪದ್ಧತಿ ನೀರಾವರಿಯ ನೀತಿ ನಿಯಮಗಳು ಆರ್ಥಿಕತೆಯ ಮೌಲ್ಯಗಳ ಬಗ್ಗೆ ಇವತ್ತಿಗೂ ಸಂಶೋಧಕರಿಗೆ ವಿದ್ವಾಂಸರಿಗೆ ಕಾಡ ತೊಡಗುತ್ತವೆ.  ಈ ನಿಟ್ಟಿನಲ್ಲಿ ಈ ಅಧ್ಯಯನ ಕೇಂದ್ರವು ವಿಚಾರ ಸಂಕೀರ್ಣಗಳನ್ನ ಚರ್ಚೆ ಗೋಷ್ಠಿಗಳನ್ನ ನಡೆಸುವುದರ ಜೊತೆಗೆ ಈ ವಿಷಯಗಳ ಬಗ್ಗೆ ಡಿಪ್ಲೋಮಗಳನ್ನು ತೆರೆಯಬೇಕಾಗಿದೆ ಅಧ್ಯಯನ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ ಕೃಷ್ಣೆಗೌಡ, ಕುಲಸಚಿವ ಕೆಬಿ ಪ್ರವೀಣ,  ಪರೀಕ್ಷಾಂಗ ಕುಲಸಚಿವ ವಿಶ್ವನಾಥ್, ಡಾ ರಾಮೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

key words: Nada Prabhu, Kempe Gowda, was a "visionary leader", Dr. Nirmalanandanatha Swamiji

Tags :

.