For the best experience, open
https://m.justkannada.in
on your mobile browser.

ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ: ಕೇಂದ್ರ ಸಚಿವ ಹೆಚ್.ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ

04:52 PM Jun 26, 2024 IST | prashanth
ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ  ಕೇಂದ್ರ ಸಚಿವ ಹೆಚ್ ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ

ನವದೆಹಲಿ, ಜೂನ್ ,26, 2024 (www.justkannada.in):  ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ತಮ್ಮ ಹೆಸರನ್ನು ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ, ಅವರು ಕನ್ನಡದ ಸ್ವತ್ತು . ಈ ವಿಚಾರಕ್ಕೆ ಬಹಳ ಮಹತ್ವ ಕೊಡುವುದಿಲ್ಲ ಎಂದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ನಾನು ಎರಡು ಬಾರಿ ಸಿಎಂ ಆದಾಗಲೂ ಸಹ ಬೆಂಗಳೂರು ಕೊಡುಗೆ ಕೊಟ್ಟಿದ್ದೇನೆ. ನಾನು ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕು ಅದನ್ನ ಮಾಡುತ್ತೇನೆ. ಇವತ್ತು ನನ್ನ ಹೆಸರು ಹಾಕಿದ್ರು, ಆದ್ರೆ ನಾಳೆ ನಾನ್ ಹೋಗೋಕೆ ಆಗುತ್ತಾ? ನಾಳೆ ರಾಷ್ಟ್ರಪತಿಗಳು ಜಂಟಿ ಭಾಷಣ ಮಾಡುತ್ತಾರೆ. ಹೀಗಾಗಿ ನಾನು ಇಲ್ಲಿ ಇರಬೇಕು. ಹೋಗುವುದಕ್ಕೆ ಆಗುವುದಿಲ್ಲ. ಅದಕ್ಕೆ ನಾನು ಇಲ್ಲೇ ಗೌರವ ಸಲಿಸುತ್ತೇನೆ ಎಂದರು.

ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣರಾದವರು ಕೆಂಪೇಗೌಡರು. ಕೆಂಪೇಗೌಡ ಕಟ್ಟಿರುವ ಕೆರೆಗಳನ್ನ ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಇರುವ ಕೆರೆಗಳನ್ನ ಕಾಪಾಡುವ ಕೆಲಸ ಮಾಡಬೇಕಿದೆ ಎಂದು ಹೆಚ್.ಡಿಕೆ ಹೇಳಿದರು.

Key words: Kempegowda Jayanti,  Union Minister, HDK

Tags :

.