For the best experience, open
https://m.justkannada.in
on your mobile browser.

ಕೇರಳ ಭೂ ಕುಸಿತ ದುರಂತ: ಗಾಯಾಳುಗಳ ನೋವಿಗೆ ಸ್ಪಂದಿಸಲು ಮುಂದಾದ ಮೈಸೂರು ಜಿಲ್ಲಾಡಳಿತ

04:29 PM Jul 31, 2024 IST | prashanth
ಕೇರಳ ಭೂ ಕುಸಿತ ದುರಂತ  ಗಾಯಾಳುಗಳ ನೋವಿಗೆ ಸ್ಪಂದಿಸಲು ಮುಂದಾದ ಮೈಸೂರು ಜಿಲ್ಲಾಡಳಿತ

ಮೈಸೂರು,ಜುಲೈ,31,2024 (www.justkannada.in): ಭಾರಿ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ 170ಕ್ಕೂ ಹೆಚ್ಚು ಮಂದಿ ಸಾವಿಗೀಡಾದರೇ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಾಳುಗಳ ನೋವಿಗೆ ಸ್ಪಂದಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಕೇರಳಗೆ  ಅಗತ್ಯ ಬಿದ್ದರೆ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಳಿಸಿಕೊಡಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಈಗಾಗಲೇ ಮೈಸೂರಿ‌ನ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಗಳನ್ನ ಮೀಸಲಿಡಲಾಗಿದೆ.

ಕೆ.ಆರ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಎಚ್.ಡಿ ಕೋಟೆ ತಾಲ್ಲೂಕು ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡಲಾಗಿದ್ದುಕೇರಳಗೆ ತೆರಳಲು ಮೈಸೂರು ವೈದ್ಯರು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ.  ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ ಸಿ ಕುಮಾರಸ್ವಾಮಿ, ವೈದ್ಯರು ಹಾಗೂ ಸಿಬ್ಬಂದಿ ಕೇರಳಕ್ಕೆ ತೆರಳಿದ್ದಾರೆ. ಈಗ ಕೇರಳದಲ್ಲಿ ವೈದ್ಯಕೀಯ ಸೇವೆಯ ಅಗತ್ಯತೆ ಇದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ತಿಳಿಸಿದ್ದೇವೆ. ಅಗತ್ಯ ಬಿದ್ದರೆ ಕೇರಳಕ್ಕೆ ಮತ್ತಷ್ಟು ಆರೋಗ್ಯ ಸಿಬ್ಬಂದಿಗಳ ಕಳಿಸಿಕೊಡುತ್ತೇವೆ. ಈಗಾಗಲೇ ಸೂಕ್ತ ಅಗತ್ಯ ಔಷಧಿ ಸಾಮಾಗ್ರಿಗಳ ಜೊತೆ ಆರು ಜನರ ತಂಡ ಈಗಾಗಲೇ ತೆರಳಿದೆ ಎಂದು ತಿಳಿಸಿದರು.

ಕೇರಳದಿಂದ ತುರ್ತು ಚಿಕಿತ್ಸಾ ಪ್ರಕರಣಗಳು ಬಂದರೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಗಳನ್ನ ಮೀಸಲಿಡಲಾಗಿದೆ. ಮೈಸೂರು ಜಿಲ್ಲಾ ಆರೋಗ್ಯ ಇಲಾಖೆಯಿಂದ ಎಲ್ಲಾ‌ ಸಿದ್ದತೆ ಮಾಡಿಕೊಳ್ಳಲಾಗಿದೆ. ಗಡಿಭಾಗ ಹೆಚ್ ಡಿ ಕೋಟೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟು 5  ಆ್ಯಂಬುಲೆನ್ಸ್‌ ಗಳನ್ನು ಮೀಸಲಿಡಲಾಗಿದೆ. 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದುಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಸಿ ಕುಮಾರಸ್ವಾಮಿ ಮಾಹಿತಿ ನೀಡಿದರು.

Key words: Kerala Landslide, Mysore, district administration, respond

Tags :

.