ಕಿಡ್ನಾಪ್ ಕೇಸ್: ಆರೋಪಿ ಸತೀಶ್ ಬಾಬು 8 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ.
04:16 PM May 06, 2024 IST
|
prashanth
ಬೆಂಗಳೂರು,ಮೇ,6,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ 2ನೇ ಆರೋಪಿಯಾಗಿರುವ ಸತೀಶ್ ಬಾಬುವನ್ನು 8 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಹೆಚ್.ಡಿ.ರೇವಣ್ಣರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಈ ನಡುವೆ 2ನೇ ಆರೋಪಿ ಸತೀಶ್ ಬಾಬುವನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ಇಂದು ಬೆಂಗಳೂರಿನ 17ನೇ ಎಸಿಎಂಎಂಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ಸತೀಶ್ ಬಾಬುನನ್ನು ಮೇ 13ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
Key words: Kidnap, case, Accused, Satish Babu, SIT, custody
Next Article