HomeBreaking NewsLatest NewsPoliticsSportsCrimeCinema

ಹೆಚ್.ಡಿ ರೇವಣ್ಣ ವಿರುದ್ದ ಕಿಡ್ನಾಪ್ ಪ್ರಕರಣ: ಮತ್ತೆ ನಾಲ್ವರನ್ನ ಬಂಧಿಸಿದ ಎಸ್ ಐಟಿ ಪೊಲೀಸರು.

11:50 AM May 09, 2024 IST | prashanth

ಮೈಸೂರು,ಮೇ,9,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯ  ಕಿಡ್ನಾಪ್ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐಟಿ ಪೊಲೀಸರು ಮತ್ತೆ ನಾಲ್ವರನ್ನ ಬಂಧಿಸಿದ್ದಾರೆ.

ಯುವ ಜನತಾದಳ‌ ಮಾಜಿ ಅಧ್ಯಕ್ಷ ಎಚ್.ಕೆ.ಸುಜಯ್,  ಕಪ್ಪಡಿ‌ ಗ್ರಾಮದ ಮಧು, ಹೆಬ್ಬಾಳು ಗ್ರಾಪಂ ಸದಸ್ಯ ಮನು, ವಕೀಲ‌ ತಿಮ್ಮಪ್ಪ ಬಂಧಿತರು. ಸಂತ್ರಸ್ತ ಮಹಿಳೆಯ ಕಿಡ್ನಾಪ್‌ ಗೆ ಸಹಕರಿಸಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಬಂಧಿತರು ನಿನ್ನೆ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿ ಪೊಲೀಸರ ವಿರುದ್ಧ ಆರೋಪಿಸಿದ್ದರು. ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆಯಷ್ಟೆ ತಿಮ್ಮಪ್ಪ ಸುದ್ದಿಗೋಷ್ಠಿ ನಡೆಸಿ ಶಾಸಕರ ಕುಮ್ಮಕ್ಕಿನಿಂದ‌ ರೇವಣ್ಣರನ್ನ ಬಂಧಿಸಲಾಗಿದೆ ಎಂದು ಆಪಾದಿಸಿದ್ದರು. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ನಾಲ್ವರನ್ನ ಎಸ್ ಐಟಿ ತಂಡ ಬಂಧಿಸಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಹೆಚ್.ಡಿ ರೇವಣ್ಣ ಅವರನ್ನ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Key words: Kidnap- case  - SIT- arrested-four

Tags :
arrestedcasefourkidnapsit
Next Article