For the best experience, open
https://m.justkannada.in
on your mobile browser.

2 ವರ್ಷಗಳಲ್ಲಿ 900 ಹೆಣ್ಣು ಭ್ರೂಣಗಳ ಹತ್ಯೆ: ಇಬ್ಬರು ವೈದ್ಯರು ಸೇರಿ 9 ಮಂದಿ ಅರೆಸ್ಟ್.

05:02 PM Nov 25, 2023 IST | prashanth
2 ವರ್ಷಗಳಲ್ಲಿ 900 ಹೆಣ್ಣು ಭ್ರೂಣಗಳ ಹತ್ಯೆ  ಇಬ್ಬರು ವೈದ್ಯರು ಸೇರಿ 9 ಮಂದಿ ಅರೆಸ್ಟ್

ಬೆಂಗಳೂರು, ನವೆಂಬರ್​​, 25,2023(www.justkannada.in): ಹೆಣ್ಣು ಭ್ರೂಣಗಳ ಹತ್ಯೆಯಲ್ಲಿ ತೊಡಗಿದ್ದ ಇಬ್ಬರು ವೈದ್ಯರು ಸೇರಿ 9 ಮಂದಿಯನ್ನ  ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಎರಡು ವರ್ಷಗಳಲ್ಲಿ 900 ಹೆಣ್ಣು ಭ್ರೂಣಗಳ ಹತ್ಯೆ ಮಾಡಿರುವುದು ಬಹಿರಂಗವಾಗಿದೆ.

ಪ್ರಕರಣ ಸಂಬಂಧ ಈ ಹಿಂದೆ ನಾಲ್ವರನ್ನು ಬಂಧಿಸಿಲಾಗಿದೆ. ಚೆನ್ನೈ ಮೂಲದ ವೈದ್ಯ ಡಾ.ತುಳಸಿರಾಮ್​, ಡಾ.ಚಂದನ್ ಬಲ್ಲಾಳ್, ಡಾ.ಚಂದನ್​ ಬಲ್ಲಾಳ್​ ಪತ್ನಿ ಮೀನಾ, ಲ್ಯಾಬ್​ ಟೆಕ್ನಿಷಿಯನ್ ನಿಸ್ಸಾರ್, ಮೈಸೂರಿನ ಖಾಸಗಿ ಆಸ್ಪತ್ರೆ ರಿಸೆಪ್ಷನಿಸ್ಟ್ ರಿಜ್ಮಾ ಬಂಧಿತರು.

ಈ 9ಮಂದಿ ತಂಡ ಸಿಂಡಿಕೇಟ್ ಮಾಡಿಕೊಂಡು ಈ ಕೃತ್ಯ ಕೃತ್ಯವೆಸಗುತ್ತಿದ್ದರು. ತಿಂಗಳಲ್ಲಿ 20ರಿಂದ 25 ಭ್ರೂಣ ಹತ್ಯೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಕಳೆದ 2 ವರ್ಷಗಳಿಂದ ನಿರಂತರವಾಗಿ ಕೃತ್ಯವೆಸಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಜಕುಮಾರ್ ರಸ್ತೆಯ ಆಯುರ್ವೇದಿಕ್ ಪೈಲ್ಸ್ ಡೇ ಕೇರ್ ಸೆಂಟರ್​, ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆಯನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ತನಿಖೆ ವೇಳೆ 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮಾಹಿತಿ ಇದೆ. ಅಕ್ಟೋಬರ್ ​​ನಲ್ಲಿ ಮೊದಲಿಗೆ ಕೇಸ್​ ದಾಖಲು ಮಾಡಿದ್ದ ಪೊಲೀಸರು, ಸದ್ಯ ಇಬ್ಬರು ವೈದ್ಯರು ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ದೇವರಾಜ್​​, ಕಳೆದ ಹದಿನೈದು ದಿನಗಳ ಹಿಂದೆ ಬೈಯಪ್ಪನಹಳ್ಳಿಯಲ್ಲಿ ಒಂದು ಕೇಸ್ ದಾಖಲಾಗಿತ್ತು. ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆಗೆ ಬರುವವರ ಮಾಹಿತಿ ಕಲೆಹಾಕಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಆ ನಾಲ್ವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದರು.

ಮೈಸೂರು ಮಾತಾ ಆಸ್ಪತ್ರೆಯ ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ ಬಲ್ಲಾಳ್, ಮತ್ತೊಬ್ಬ ವೈದ್ಯ ಡಾ, ತುಳಸಿರಾಮ್, ರಿಜ್ಮಾ ಮಧ್ಯವರ್ತಿಯಾಗಿ ಕೆಲಸ ಮಾಡಿ ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಈ ಗ್ಯಾಂಗ್ ಈ ರೀತಿ ಕೃತ್ಯವೆಸಗುತ್ತಿರುವುದು ಗೊತ್ತಾಗಿದೆ. ಭ್ರೂಣ ಪತ್ತೆಗೆ ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಶೀಟ್ ಮನೆ ಮಾಡಿಕೊಂಡು ಅದರಲ್ಲಿ ಸ್ಕ್ಯಾನಿಂಗ್ ಮಾಡಿದ್ದರು. ಪೊಲೀಸರು ದಾಳಿ ನಡೆಸಿ ಸ್ನ್ಕಾನಿಂಗ್ ಯಂತ್ರ ಸೇರಿದಂತೆ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಹೆಚ್ಚಿನ ವಿಚಾರಣೆ ವೇಳೆ ಕೆಲ ಆಸ್ಪತ್ರೆಗಳು ಮತ್ತು ವೈದ್ಯರು ಭಾಗಿಯಾಗಿರುವುದು ಗೊತ್ತಾಗಿತ್ತು. ಭ್ರೂಣ ಪತ್ತೆಯ ಜೊತೆಗೆ ಹತ್ಯೆ ಕೂಡ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

Key words: Killing - 900  foetuses- 9 arrested - two doctors-bangalore-police

Tags :

.