ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವಕೀಲನ ಬರ್ಬರ ಹತ್ಯೆ.
01:29 PM Dec 07, 2023 IST
|
prashanth
ಕಲಬುರಗಿ,ಡಿಸೆಂಬರ್,7,2023(www.justkannada.in): ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಕೀಲರೊಬ್ಬರನ್ನ ಹತ್ಯೆ ಮಾಡಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.
ನಗರದ ಸಾಯಿ ಮಂದಿರ ಬಳಿಯಿರುವ ಗಂಗಾ ಅಪಾರ್ಟ್ಮೆಂಟ್ ಬಳಿ ಈ ಘಟನೆ ನಡೆದಿದೆ. ಈರಣ್ಣಗೌಡ ಪಾಟೀಲ್ (40) ಹತ್ಯೆಯಾದ ವಕೀಲ. ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಮಚ್ಚು ಹಿಡಿದು ವಕೀಲ ಈರಣ್ಣಗೌಡ ಪಾಟೀಲ್ ಅವರನ್ನ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.
Key words: killing - lawyer -kalburgi
Next Article