HomeBreaking NewsLatest NewsPoliticsSportsCrimeCinema

ಪುಸ್ತಕ ಓದುವ ಮೂಲಕ ಗಳಿಸುವ ಜ್ಞಾನಾರ್ಜನೆ ಹೆಚ್ಚು ಪರಿಣಾಮಕಾರಿ- ಸಿ.ಎಂ.ಸಿದ್ದರಾಮಯ್ಯ

01:28 PM Feb 10, 2024 IST | prashanth

ಬೆಂಗಳೂರು ಫೆಬ್ರವರಿ,10,2024(www.justkannada.in):  ಜ್ಞಾನಾರ್ಜನೆಗೆ   ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ನುಡಿದರು.

ವೀರಲೋಕ ಪ್ರಕಾಶನ ಆಯೋಜಿಸಿದ್ದ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.‌ ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಂಡು ಓದುವ ಅಭಿರುಚಿ ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಿ ಎಂದು ನೆರೆದಿದ್ದ ಓದುಗರಿಗೆ ಕರೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಲೇಖಕರಾದ ಬರಗೂರು ರಾಮಚಂದ್ರಪ್ಪ, ಮಾಜಿ  ಸಂಸದ ಉಗ್ರಪ್ಪ ಮತ್ತು ಸಂಪಾದಕರಾದ ವಿಶ್ವೇಶ್ವರ ಭಟ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Key words: Knowledge -gained - reading books -more effective- CM -Siddaramaiah

Tags :
Knowledge -gained - reading books -more effective- CM -Siddaramaiah
Next Article