ಭೂ ಸುರಕ್ಷಾ ಯೋಜನೆ : ಕೊಡಗಿನಲ್ಲಿ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ
ಕೊಡಗು ಜನವರಿ 05, ೨೦೨೪ : (www̤ justkannada in news) ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಬಹು ನಿರೀಕ್ಷಿತ "ಭೂ ಸುರಕ್ಷಾ" ಪ್ರಾಯೋಗಿಕ ಯೋಜನೆಗೆ ಕೊಡಗಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದರು.
ಈ ಯೋಜನೆಗೆ ಪ್ರಾಯೋಗಿಕವಾಗಿ 31 ಜಿಲ್ಲೆಯ 31 ತಾಲೂಕು ಗಳನ್ನು ಆಯ್ಕೆ ಮಾಡಿದ್ದು ಈ ತಾಲೂಕುಗಳ ಎಲ್ಲಾ ಭೂ ಮತ್ತು ಸರ್ವೇ ದಾಖಲೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವುದು ಯೋಜನೆಯ ಗುರಿ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಜನಸಾಮಾನ್ಯರಿಗೆ ಡಿಜಿಟಲ್ ದಾಖಲೆಗಳನ್ನೇ ನೀಡಲಾಗುವುದು. ತದನಂತರ ಈ ಯೋಜನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ರೆಕಾರ್ಡ್ ರೂಂ ಗಳಲ್ಲಿ ಕಡತ ಕಳುವಾಗುವುದು ಹಾಗೂ ತಿದ್ದುವುದು ಸೇರಿದಂತೆ ಅನೇಕ ಅಕ್ರಮಗಳಿಂದಾಗಿ ಶತಮಾನಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳಿಂದ ರೈತರನ್ನು ಪಾರು ಮಾಡುವ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಿರಿಯ ಅಧಿಕಾರಿಗಳ ಕಳೆದ ಆರು ತಿಂಗಳ ಪರಿಶ್ರಮ ಈ ಯೋಜನೆಯಾಗಿದೆ.
Key words: Kodagu ̲ landrecords ̲ digitalisation ̲ krishna ̲ byregowda