ಕೊಡಗು-ಮೈಸೂರು ಲೋಕಸಭಾ ಚುನಾವಣೆ: ಏ.13 ರಿಂದ 17 ರವರೆಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ.
ಮೈಸೂರು, ಏಪ್ರಿಲ್, 12,2024 (www.justkannada.in): ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕ ಮತದಾರರು ಹಾಗೂ ಶೇ.40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ವಿಶೇಷ ಚೇತನ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಎಲೆಕ್ಟ್ರಾನ್ ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಿ ಸದರಿ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನ ಏಪ್ರಿಲ್ 13 ರಿಂದ 17 ರವರೆಗೆ ಮಾಡಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಹೋಂ ವೋಟಿಂಗ್ ನಡೆಯುವ ದಿನಾಂಕಗಳು:
ಮಡಿಕೇರಿಯಲ್ಲಿ(208) ಏ.15 ರಿಂದ 17 ರವರೆಗೆ , ವಿರಾಜಪೇಟೆ(209) ಏ.15 ರಿಂದ 17ರವರೆಗೆ, ಪಿರಿಯಾಪಟ್ಟಣ(210) ಏ.14 ರಿಂದ 15ರವರೆಗೆ, ಹುಣಸೂರು(212) ಏ.15 ರಿಂದ 16ರವರೆಗೆ, ಚಾಮುಂಡೇಶ್ವರಿ(215) ಏ.13 ರಿಂದ 14ರವರೆಗೆ, ಕೃಷ್ಣರಾಜ(216) ಏ.13 ರಿಂದ 14ರವರೆಗೆ, ಚಾಮರಾಜ(217) ಏ.14 ರಿಂದ 15 ಹಾಗೂ ನರಸಿಂಹರಾಜ(218)ದಲ್ಲಿ ಏ.13 ರಿಂದ 14 ರವರೆಗೆ ಹೋಮ ವೋಟಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Kodagu-Mysore-LokSabha Elections- Voting -home