ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಮಂತ್ರಿ ಸ್ಥಾನ ಬಿಡಲು ಸಿದ್ಧ- ಕೆ.ಎನ್ ರಾಜಣ್ಣ.
ಬೆಂಗಳೂರು,ಮೇ,25,2024 (www.justkannada.in): ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಮಂತ್ರಿ ಸ್ಥಾನ ಬಿಡಲು ಸಿದ್ಧನಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಧ್ಯಕ್ಷರ ಬದಲಾವಣೆ ಸನ್ನೀವೇಶ ಎದುರಾದರೆ ನಾನು ಸಿದ್ದ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ. ನಾನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಧ್ಯಕ್ಷ ಸ್ಥಾನ ಸಿಕ್ಕರೇ ಪಕ್ಷಕ್ಕೆ ಸಮರ್ಪಿಸುತ್ತೇನೆ ಎಂದರು.
ದೇವರಾಜೇಗೌಡ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಆಡಿಯೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ. ಕರೆ ಮಾಡಿದರೇ ಮಾತನಾಡದೇ ಇರಲು ಆಗುತ್ತಾ. ನಮ್ಮನ್ನು ಸಿಲುಕಿಸಲು ಪ್ರಯತ್ನ ಮಾಡ್ತಾರೆ. ಹೆಣ್ಣು ಮಕ್ಕಳು ಫೋನ್ ಮಾಡಿದರೇ ನಾನು ಬ್ಲಾಕ್ ಮಾಡುತ್ತೇನೆ. ಯಾಕಪ್ಪ ಬೇಕು ಅಂತಾ ಬ್ಲಾಕ್ ಮಾಡುತ್ತೇನೆ. ನಾನು ಮೊಬೈಲ್ ಎಕ್ಸ್ ಪರ್ಟ್ ಅಲ್ಲ ಪೋನ್ ಮಾಡೋದು ಮಾತ್ರ ಗೊತ್ತು ಎಂದರು.
ಪ್ರಜ್ವಲ್ ಮಾಡಿದ್ದು ಅಪರಾಧ. ರಿಲೀಸ್ ಮಾಢಿದ್ದು ಅಪರಾಧವೇ..? ಹೆಚ್ ಡಿಕೆ ನಮ್ಮ ಕುಟುಂಬ ಬೇರೆ ಅವರ ಕುಟುಂಬ ಬೇರೆ ಎಂದಿದ್ದಾರೆ. ಇನ್ನು ಹೆಚ್ ಡಿ ದೇವೇಗೌಡರ ಪತ್ರಕ್ಕೆ ಏನು ಮಾನ್ಯತೆ ಇದೆ. ಕುಮಾರಸ್ವಾಮಿ ಎರಡು ಕುಟುಂಬ ಬೇರೆ ಅಂತಾರಲ್ಲ ಯಾವ ಕುಟುಂಬಕ್ಕೆ ಅಗೌರವ ಆಗ್ತಾ ಇದೆ ಹೇಳಬೇಕಲ್ವಾ ಎಂದು ಕೆ.ಎನ್ ರಾಜಣ್ಣ ಪ್ರಶ್ನಿಸಿದರು.
Key words: KPCC, president, post, minister, KN Rajanna