384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ ಭರ್ತಿಗೆ ಪ್ರಸ್ತಾವ.
09:34 AM Feb 03, 2024 IST
|
mahesh
ಬೆಂಗಳೂರು, ಫೆ.೦೩, ೨೦೨೪ : 2023-24 ಸಾಲಿಗೆ ಗೆಜೆಟೆಡ್ ಪ್ರೊಬೇಷನರ್‌ಗಳ ಗ್ರೂಪ್-ಎ ವೃಂದದ 159 ಮತ್ತು ಗ್ರೂಪ್-ಬಿ ವೃಂದದ 225 ಸೇರಿ 384 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದೆ.
ಇದರಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಿರಿಯ ಶ್ರೇಣಿಯ ಸಹಾಯಕ ಆಯುಕ್ತ (ಎ.ಸಿ) 40, ಡಿವೈಎಸ್‌ಪಿ 7, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ 41 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ /ಸಹಾಯಕ ಕಾರ್ಯದರ್ಶಿ 40 ಹುದ್ದೆಗಳೂ ಸೇರಿವೆ.
ವಿವಿಧ ಇಲಾಖೆಗಳ ಮೂಲ ವೃಂದದ ಹುದ್ದೆಗಳು 307, ಕಲ್ಯಾಣ ಕರ್ನಾಟಕ ವೃಂದದ 77 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ನಡೆಸುವಂತೆ ಪ್ರಸ್ತಾವ ಉಲ್ಲೇಖಿಸಿದೆ.
ಕೃಪೆ : ಪ್ರಜಾವಾಣಿ
key words: kpsc ̲ jobs ̲ vaccant ̲ exams ̲ karnataka
Next Article