For the best experience, open
https://m.justkannada.in
on your mobile browser.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಕೇಸ್:   ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಮೂವರು ಸಸ್ಪೆಂಡ್

11:35 AM Jun 10, 2024 IST | prashanth
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಕೇಸ್    ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಮೂವರು ಸಸ್ಪೆಂಡ್

ಮೈಸೂರು,ಜೂನ್,10,2024 (www.justkannada.in): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆ ಕೆ.ಆರ್.ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಮೂವರನ್ನ  ಅಮಾನತು ಮಾಡಲಾಗಿದೆ.

ಇನ್ಸ್ ಪೆಕ್ಟರ್ ಸಂತೋಷ್ , ಎಎಸ್ ಐ  ಗಿರೀಶ್ , ಹೆಡ್ ಕಾನ್ಸ್ ಟೇಬಲ್ ರಾಘವೇಂದ್ರ  ಮೂವರು ಪೊಲೀಸ್ ಸಿಬ್ಬಂದಿಗಳನ್ನ ಅಮಾನತು ಮಾಡಿ IG ಅಮಿತ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಆತ್ಮಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ.

ಆರೋಪಿ ಲೋಕೇಶ್ ಯುವತಿ ನಗ್ನ ಚಿತ್ರ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಆರೋಪಿಸಿ   ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಕುಟುಂಬ ದೂರು ನೀಡಿತ್ತು. ಈ ಬಗ್ಗೆ ಠಾಣೆಗೆ ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಮಧ್ಯೆ ಕುಟುಂಬದ ನಾಲ್ವರು ಮಲೇ ಮಹದೇಶ್ವರ ಬೆಟ್ಟದ ಬಳಿಯ ತಾಳಬೆಟ್ಟದಲ್ಲಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ  ನಾಲ್ವರ ಪೈಕಿ ಓರ್ವ ಸಾವನ್ನಪ್ಪಿದ್ದರು. ಪೊಲೀಸರ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಮೂವರನ್ನು ಅಮಾನತು ಮಾಡಲಾಗಿದೆ.

ಆರೋಪಿ ಲೋಕೇಶ್ ಬಂಧನ.

ಮಲೆ‌ಮಹದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಚೀರನಹಳ್ಳಿ ಗ್ರಾಮದ ಆರೋಪಿ ಲೋಕೇಶ್ ನನ್ನು ಮಳವಳ್ಳಿ ಸಂಬಂಧಿಕರ ಮನೆಯಲ್ಲಿ  ಮಳವಳ್ಳಿ ಠಾಣಾ ಪೊಲೀಸರು‌ ಅರೆಸ್ಟ್ ಮಾಡಿದ್ದಾರೆ.  SC/ST ದೌರ್ಜನ್ಯ ಕಾಯ್ದೆ, ಪೋಕ್ಸೋ ಹಾಗೂ IPC 370 ಅಡಿ ಆರೋಪಿ ವಿರುದ್ದ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ. ಅಪ್ರಾಪ್ತೆ ಜೊತೆಯಿದ್ದ ಖಾಸಗಿ ಕ್ಷಣಗಳ ವಿಡಿಯೋ ವೈರಲ್ ಮಾಡುವುದಾಗಿ ಆರೋಪಿ ಲೋಕೇಶ್ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.

Key words: KR Nagar, Suicide case, three police, suspended

Tags :

.