HomeBreaking NewsLatest NewsPoliticsSportsCrimeCinema

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೃಷ್ಣಾನದಿ ನೀರು: ಎಚ್.ಡಿ ದೇವೇಗೌಡರ ಹೇಳಿಕೆಗೆ ಸಚಿವ ಎಂಬಿ ಪಾಟೀಲ್ ವಿರೋಧ.

06:32 PM Apr 25, 2024 IST | prashanth

ವಿಜಯಪುರ,ಏಪ್ರಿಲ್,25,2024 (www.justkannada.in):  'ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಗುತ್ತದೆ ಎಂಬ' ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೇಳಿಕೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಹೆಚ್.ಡಿ ದೇವೇಗೌಡರ ಹೇಳಿಕೆ ಜನರನ್ನು ದಾರಿ ತಪ್ಪಿಸುವಂತಿದೆ. ದೇವೇಗೌಡರ ಹೇಳಿಕೆ ಸರಿಯಿಲ್ಲ.  ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ 2010ರಲ್ಲಿ ಪ್ರಕಟವಾಗಿರುವ ಬ್ರಿಜೇಶ್‌ ಕುಮಾರ್‌ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕದ ಪಾಲಿನ 173 ಟಿಎಂಸಿ ನೀರಲ್ಲಿ ಯಾವಾವ ಯೋಜನೆಗೆ ಎಷ್ಟೆಷ್ಟು ಟಿಎಂಸಿ ನೀರು ಎಂಬುದು ಖಚಿತವಾಗಿ ತಿಳಿಸಲಾಗಿದೆ. ಇದರಲ್ಲಿ ಒಂದು ಟಿಎಂಸಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಲು ತೀರ್ಪಿನಲ್ಲೇ ಅವಕಾಶವಿಲ್ಲ ಎಂದರು.

ಹೀಗಾಗಿ  ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕಕ್ಕೆ ಕೊಡಲು ಕಷ್ಟಸಾಧ್ಯ.  ಹಿರಿಯರಾದ ಎಚ್‌.ಡಿ. ದೇವೇಗೌಡರಿಗೆ ಈ ಎಲ್ಲ ವಿಷಯ ಗೊತ್ತಿದ್ದೂ ರಾಜಕೀಯ ಲಾಭಕ್ಕಾಗಿ ಮಾತನಾಡುವುದು ತಪ್ಪು ಎಂದು ಸಚಿವ ಎಂಬಿ ಪಾಟೀಲ್ ಆಕ್ಷೇಪಿಸಿದರು.

Key words: Krishna river, water, Minister , MB Patil

Tags :
Krishna river –water-Minister -MB Patil -HD Deve Gowda
Next Article