For the best experience, open
https://m.justkannada.in
on your mobile browser.

ಪರೀಕ್ಷೆಯಲ್ಲಿ ವಿಫಲರಾದಾಗ ದೃತಿಗೆಡದೆ ಸಫಲವಾಗುವತ್ತ ನಿರಂತರ ಶ್ರಮವಹಿಸಬೇಕು- ಡಾ. ಸೋಮನಾಥ್‌ ಜಿ ಪಾಟ್ನೆ.

05:24 PM May 15, 2024 IST | prashanth
ಪರೀಕ್ಷೆಯಲ್ಲಿ ವಿಫಲರಾದಾಗ ದೃತಿಗೆಡದೆ ಸಫಲವಾಗುವತ್ತ ನಿರಂತರ ಶ್ರಮವಹಿಸಬೇಕು  ಡಾ  ಸೋಮನಾಥ್‌ ಜಿ ಪಾಟ್ನೆ

ಮೈಸೂರು,ಮೇ,15,2024 (www.justkannada.in): ಸ್ಪರ್ಧಾತ್ಮಕ ಯುಗದಲ್ಲಿ ಶಿಬಿರಾರ್ಥಿಗಳು ಒ೦ದು ಪರೀಕ್ಷೆಯಲ್ಲಿ ವಿಫಲರಾದರೆ ಧೃತಿಗೆಡಬಾರದು, ಅದನ್ನು ಅನುಭವವಾಗಿ ಪರಿಗಣಿಸಿ ಸಫಲರಾಗುವತ್ತ ನಿರಂತರ ಶ್ರಮಹಿಸಬೇಕು ಎ೦ದು ಸರ್ಕಾರದ ಲೋಕೋಪಯೋಗಿ ಇಲಾಖೆಯ ಉಪಕಾರ್ಯದರ್ಶಿ ಹಾಗೂ ಆರ್ಥಿಕ ಸಲಹೆಗಾರ ಡಾ. ಸೋಮನಾಥ್‌ ಜಿ ಪಾಟ್ನೆ ಅಭಿಪ್ರಾಯಪಟ್ಟರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾ೦ಗಣದಲ್ಲಿ ಆಯೋಜಿಸಿದ್ದ ಕೆಎಎಸ್‌ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ 50 ದಿನಗಳ ತರಬೇತಿ ಶಿಬಿರವನ್ನು ಉದ್ಭಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದಗಳಿಗೆ ಆಯ್ಕೆ ಮಾಡುವುದರಿಂದ ಸ್ಪರ್ಧೆ ಹೆಚ್ಚಾಗಿದೆ ಹಾಗಾಗಿ ಕೆಲವರಿಗೆ ಕಷ್ಟ ಎನಿಸಬಹುದು, ಆದರೆ ನೀವುಗಳು ಸ್ವತಃ ಸ್ಫೂರ್ತಿ ಮತ್ತು ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದಲ್ಲಿ ಸಫಲರಾಗುವುದು ಸುಲಭ ಎಂದರು.

ಶಿಸ್ತು ಸ೦ಯಮ, ಕ್ರಮಬದ್ಧ ಅಧ್ಯಯನದೊಂದಿಗೆ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಹಲವಾರು ಸಿದ್ಧತೆಗಳನ್ನು ಬಹಳ ಶ್ರದ್ಧಯಿ೦ದ ತಯಾರಿ ಮಾಡಿಕೊಳ್ಳಬೇಕು. ತರಬೇತಿಯ ಉಪಯೋಗ ಪಡೆದು ತಲ್ಲೀನತೆಯಿ೦ದ ಯಶಸ್ವಿಯಾಗುವೆಡೆಗೆ ಗಮನಹರಿಸಬೇಕು. ಗ್ರಾಮಾ೦ತರ ಭಾಗದವರಿಗೆ ತರಬೇತಿ ತು೦ಬಾ ಉಪಯುಕ್ತವಾಗಿದೆ. ದಿನಪತ್ರಿಕೆ. ಓದುವ ಕಲೆ ಕರಗತ ಮಾಡಿಕೊಳ್ಳಬೇಕು ಹಾಗೂ ಸಮಾಜದ ಕೆಳಸ್ತರದವರಿಗೆ ಸಹಾಯ ಮಾಡಬೇಕೆ೦ಬ ಭಾವನೆ ಬೆಳೆಸಿಕೊ೦ಡರೆ ಸಾಧಿಸಲು ಮನೋಸ್ಮೈರ್ಯ ದೃಢವಾಗಲಿದೆ ಎ೦ದು ತಿಳಿಸಿದರು.

ಅಂತರ್ಜಾಲ, ನವ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತ ಉದ್ಯೋಗದ ಜೊತೆ ಶಿಕ್ಷಣ ಪಡೆಯಲು ಪ್ರಯತ್ನಿಸಿ ಇದಕ್ಕಾಗಿ ಕರಾಮುವಿ ನಿಮಗೆಲ್ಲರಿಗೂ ಒ೦ದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಅದನ್ನು ಸದುಪಯೋಗಪಡಿಸಿಕೂ೦ಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಶಿಬಿರದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ. . ಪ್ರಿಯದರ್ಶಿನಿ ಮಾತನಾಡಿ,  ಓದುವ ಸ೦ದರ್ಭದಲ್ಲಿ ಮನರಂಜನೆ ಪಡುವುದಕ್ಕಿ೦ತ, ಪರಿಶ್ರಮದಿ೦ದ ಓದಿ ಸಫಲರಾಗಿ ಮು೦ದೆ ಜೀವನ ಪರ್ಯ೦ತ ಮನರ೦ಜನೆ ಪಡೆಯಬಹುದು ಎ೦ದು ಸಲಹೆ ನೀಡಿದರು.

ಇ೦ದಿನ ಏಕಾಗ್ರತೆಯ ದೊಡ್ಡ ಸವಾಲು ಮೊಬೈಲ್‌, ಸಾಮಾಜಿಕ ಜಾಲತಾಣ ಇವುಗಳನ್ನು ಜಾಗರೂಕತೆಯಿ೦ದ ಬಳಸಬೇಕು, ಏಕಾಗ್ರತೆ ಕಳೆದುಕೊಳ್ಳಬಾರದಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಐಎಎಸ್‌ ಅಥವಾ ಕೆಎಎಸ್‌ ಪರೀಕ್ಷೆಗಳಿಗೆ ಸಾಮಾನ್ಯವಾಗಿ ಪ್ರಬ೦ಧಗಳಿರುತ್ತವೆ. ನಾವು ಗಳಿಸಿಕೊ೦ಡ ಜ್ಞಾನವನ್ನು ಸರಳ ಭಾಷೆಯಲ್ಲಿ ಉತ್ತರ ಪತ್ರಿಕೆಯಲ್ಲಿ ಬರೆದರೆ ಮೌಲ್ಯ ಮಾಪನ ಮಾಡುವವರಿಗೂ ಅರ್ಥವಾಗಲಿದೆ. ಇದರಿ೦ದ ನಾವು ಹೇಳುವ ಸಂಗತಿ ಅವರಿಗೆ ಮನದಟ್ಟಾಗುತ್ತದೆ. ಜೊತೆಗೆ ಸ್ಫರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ದಿನಪತ್ರಿಕೆಗಳನ್ನು ಹೆಚ್ಚು ಓದಬೇಕು. ಸಂಪಾದಕೀಯ ಮತ್ತುಪ್ರಮುಖ ಘಟನೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು.ಎ೦ದು ಸಲಹೆ ನೀಡಿದರು.  ಓದಿನಲ್ಲಿ ಪ್ರಾಮಾಣಿಕತೆ, ಬದ್ಧತೆ, ಅಚಲ ವಿಶ್ವಾಸ ಹಾಗೂ ಸ್ಮಾರ್ಟ್‌ ಹಾರ್ಡ್‌ವರ್ಕ್‌ ಇದ್ದರೆ ಯಶಸ್ಸು ಸಾಧ್ಯ ಎ೦ದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿ೦ದ, ಯೋಜನೆ ಹಾಕಿಕೊ೦ಡು ಪುಟ ಪುಟ ಓದುವುದರೊಂದಿಗೆ ಪುಸ್ತಕವನ್ನು ಅಧ್ಯಯನ ಮಾಡುವಂತೆ ಇದೆಲ್ಲದರ ಸದುಪಯೋಗ ಪಡೆದುಕೊಳ್ಳಬೇಕು ಆಗ ನಿಮ್ಮ ಜೀವನ ಸಾರ್ಥಕವಾಗಲಿದೆ ಎ೦ದು ಅಭಿಪ್ರಾಯಪಟ್ಟರು.

ಪ್ರತಿದಿನವನ್ನು ನೀವು ಯಾವ ರೀತಿ ಬಳಸಿಕೊಳ್ಳುತ್ತಿರಾ ಎ೦ಬುದರ ಮೇಲೆ ಸಫಲತೆ ನಿರ್ಧಾರವಾಗಲಿದೆ. ಎ೦ದರು. ಉನ್ನತ ಅಧಿಕಾರ ಬೇಕೆ೦ದರೆ ಶ್ರಮವೂ ಉನ್ನತ ಮಟ್ಟದಲ್ಲಿರಬೇಕಂದು ಹೇಳಿದರು.

ಕುಲಸಚಿವರಾದ ಪೊ ಕೆ. ಬಿ ಪ್ರವೀಣ ಮಾತನಾಡಿ ಪ್ರಸ್ತುತತೆ ಹಾಗೂ ನಾವೀನ್ಯತೆ ರೂಢಿಸಿಕೊಂಡು, ಸತತ ಅಭ್ಯಾಸದೊಂದಿಗೆ ನೈಪುಣ್ಯತೆ ಸಾಧಿಸಿದರೆ ಯಶಸ್ಸು ಹತ್ತಿರವಾಗುತ್ತದೆ ಎಂದರು.

ಕಾಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಡಾ.ಹೆಚ್‌ ವಿಶ್ವನಾಥ್‌, ಡೀನ್‌ ಪ್ರೊ ಲಕ್ಷ್ಮಿ, ಮಾತನಾಡಿದರು. ಸ೦ಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ.ಬೀರಪ್ಪ ಹೆಚ್‌, ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ. ಕೊಪ್ಪಲ್‌ ಉಪಸ್ಥಿತರಿದ್ದರು.

Key words: KSOU, Competitive Examination, Training

Tags :

.