For the best experience, open
https://m.justkannada.in
on your mobile browser.

KSOU:  ಪ್ರಾಧ್ಯಾಪಕ ಮತ್ತ ಸಹ ಪ್ರಾಧ್ಯಾಪಕ ನೇಮಕಾತಿ ಸಂದರ್ಶನ ಮುಂದೂಡಿಕೆ

06:31 PM Sep 17, 2024 IST | prashanth
ksou   ಪ್ರಾಧ್ಯಾಪಕ ಮತ್ತ ಸಹ ಪ್ರಾಧ್ಯಾಪಕ ನೇಮಕಾತಿ ಸಂದರ್ಶನ ಮುಂದೂಡಿಕೆ

ಮೈಸೂರು,ಸೆಪ್ಟಂಬರ್, 17,2024 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಖಾಲಿಇದ್ದ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸಂದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಕೆಎಸ್ ಒಯು ಕುಲಸಚಿವರು,  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಖಾಲಿಇದ್ದ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ: 16.08.2023 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಹೈದ್ರಬಾದ್ ಕರ್ನಾಟಕ 371 (ಜೆ) ಗೆ ಮೀಸಲಿರಿಸಿದ ಸಹ ಪ್ರಾಧ್ಯಾಪಕ ಶಿಕ್ಷಣಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಿಗೆ ಅರ್ಹ ಅಭ್ಯರ್ಥಿ ಆಯ್ಕೆ ಸಂಬಂಧ ದಿನಾಂಕ: 18.09.2024 ರಂದು ಸಂದರ್ಶನ ಏರ್ಪಡಿಸಲಾಗಿತ್ತು.

ಮಾನ್ಯ ಉಚ್ಚನ್ಯಾಯಾಲಯದ  W.P No-4972/2024 : 17.09.2024 8 ಆದೇಶದನ್ವಯ ಸಹ ಪ್ರಾಧ್ಯಾಪಕ ಶಿಕ್ಷಣಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳ ಸಂದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಂದರ್ಶನದ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

Key words: KSOU,  Postpone, interview, appointment, Professor

Tags :

.